1. ಯಾರು ಹೊಸ ಭೂಖಂಡಗಳನ್ನು ಕಂಡುಹಿಡಿದರು? -ಮಗಲನ್, ಕೋಲಂಬಸ್, ವಾಸ್ಕೊ - ಡ - ಗಾಮ

2. ಪ್ರಕೃತಿ ಮತ್ತು ಮಾನವ ಸಂಬಂಧ ತಿಳಿಸುವ ಶಾಸ್ತ್ರ - ಭೂಗೋಳಶಾಸ್ತ್ರ

3. ಪ್ರಕೃತಿಯನ್ನು ಉಪಯೋಗಿಸಿ ಮಾನವ ಹೀಗೆ ಬದಕುತ್ತಿದ್ದಾನೆ ಎಂಬುದರ ಅಧ್ಯಯನ - ಮಾನವ ಭೂಗೋಳ

4. ನಕ್ಷತ್ರಗಳ ಉಗಮಕ್ಕೆ ಬೇಕಾಗುವ ಮೂಲಧಾತುಗಳು - ಜಲಜನಕ ಮತ್ತು ಹೀಲಿಯಂ

5. ಅನಿಲ ತುಂಬಿದ ದೈತ್ಯಗ್ರಹಗಳು - ಗುರು, ಶುಕ್ರ, ಶನಿ, ಯುರೇನಸ್, ನೆಪ್ಯೂನ್

6. ಪ್ರತಿ 24 ಗಂಟೆ ಗಂಟೆಗೊಮ್ಮೆ ಪ್ರತಿ ರೇಖಾಂಶ ಸೂರ್ಯನ ಎದುರು ಬರುವ ವೇಳೆ - ಸ್ಥಳೀಯ ವೇಳೆ

7. ಭೂಮಿಗಿರುವ ಚಲನೆಗಳು - ದೈನಿಕ ಮತ್ತು ವಾರ್ಷಿಕ ಚಲನೆಗಳು

8. ಹಗಲು ರಾತ್ರಿಗಳು ಉಂಟಾಗುವುದು - ದೈನಿಕ ಚಲನೆಯಿಂದ

9. ಋತುಮಾನಗಳಾಗುವುದು - ವಾರ್ಷಿಕ ಚಲನೆಯಿಂದ

10. ಪೂರ್ವದಿಂದ ಪಶ್ಚಿಮಕ್ಕೆ ಎಳೆದ ಕಾಲ್ಪನಿಕ ರೇಖೆ - ಅಕ್ಷಾಂಶ

11. ಉತ್ತರದಿಂದ ದಕ್ಷಿಣಕ್ಕೆ ಎಳೆದ ಕಾಲ್ಪನಿಕ ರೇಖೆಗಳು - ರೇಖಾಂಶಗಳು

12. ಭೂಗೋಳಶಾಸ್ತ್ರದ ಇತರ ಹೆಸರುಗಳು - ಸಸ್ಯಗಳ ವಿಜ್ಞಾನ, ಹಂಚಿಕೆಯ ವಿಜ್ಞಾನ, ವಿಶ್ಲೇಷಣಾ ವಿಜ್ಞಾನ, ಸಂಬಂಧ ವಿಜ್ಞಾನ

13. ಒಂದು ದೇಶದ ಮಧ್ಯದಲ್ಲಿ ಹಾದು ಹೋಗುವ ರೇಖಾಂಶದ ಮೇಲೆ ಇರುವ ವೇಳೆ - ಆ ದೇಶದ ಪ್ರಮಾಣಿತ ವೇಳೆ

14. ಭಾರತದ ಪ್ರಮಾಣಿತ ವೇಳೆ ಇರುವ ಸ್ಥಳ - 82.5° ರೇಖಾಂಶ (ಅಲಹಾಬಾದ್ ಹತ್ತಿರವಿದೆ)

15. ಅಂತಾರಾಷ್ಟ್ರೀಯ ದಿನರೇಖೆಯನ್ನು ನಿರ್ಧರಿಸುವ ರೇಖಾಂಶ – 180° ರೇಖಾಂಶ

16. ಅಧಿಕವರ್ಷ ಉಂಟಾಗುವುದು -4 ವರ್ಷಗಳಿಗೆ ಒಂದು ದಿನ ಹೆಚ್ಚಾಗುವುದು

17. ಅಂತರರಾಷ್ಟ್ರೀಯ ದಿನ ರೇಖೆ ಹಾದು ಹೋಗಿರುವುದು - ಬೆರಿಂಗ್ ಸಮುದ್ರ

18. ಸೌರಮಂಡಲದ ಅಧಿಪತಿ - ಸೂರ್ಯ

19. ರಷ್ಯಾದಲ್ಲಿರುವ ಕಾಲ ವಲಯಗಳು - 11

20. ಅಮೇರಿಕಾದ ಕಾಲ ವಲಯಗಳು - 04

21. ಸೊನ್ನೆ ಡಿಗ್ರಿ ರೇಖಾಂಶವು ಈ ಪಟ್ಟಣದ ಮೇಲೆ ಹಾದುಹೋಗಿದೆ - ಗ್ರೀನ್‌ವಿಚ್

22. ಸೂರ್ಯನ ಹತ್ತಿರವಿರುವ ನಕ್ಷತ್ರ - ಪ್ರಾಕ್ಸಿಮಾ ಸೆಂಟಾರಿ

23. ಭೂಮಿಗೆ ಹತ್ತಿರವಿರುವ ನಕ್ಷತ್ರ - ಸೂರ್ಯ

24. ಮುಂಜಾವಿನ ತಾರೆ - ಶುಕ್ರಗ್ರಹ

25. ದೈತ್ಯನಕ್ಷತ್ರ - ಬಿಟಲ್‌ ಗೀಸ್

26. ರಿಗೆಲ್ ನಕ್ಷತ್ರದ ಬಣ್ಣ - ನೀಲಿ

27. 1986 ರಲ್ಲಿ ಕಾಣಿಸಿಕೊಂಡ ಧೂಮಕೇತು (once in 76 years) - ಹ್ಯಾಲಿ

28. . . . . ಮೀನಮಾಟ ರೋಗ ಬರುವುದು - ಜಲಮಾಲಿನ್ಯದಿಂದ

29. ಮೀನಮಾಟಕ್ಕೆ ಕಾರಣವಾಗುವ ರಾಸಾಯನಿಕ ಸಂಯುಕ್ತ - ಮಿಥೈಲ್ ಪಾದರಸ

30. ಇದು ಓಜೋನ್ ಪದರವನ್ನು ನಾಶಪಡಿಸುತ್ತದೆ. - ಕ್ಲೋರೋಫ್ಲೋರೋ ಕಾರ್ಬನ್

31. ಶಬ್ದಮಾಲಿನ್ಯ ಅಳೆಯುವ ಮಾನ - ಡೆಸಿಬಲ್

32. ಪರಿಸರ ಎಂಬುದರ ಗ್ರೀಕ್ ಪದದ ಅರ್ಥ - ಮನೆಯ ಅಧ್ಯಯನ

33. ಶಿಲೆ ಹಾಗೂ ಭೂಭಾಗದಿಂದ ಕೂಡಿರುವ ಭಾಗ - ಶಿಲಾಗೋಳ

34. ಭೂಮಿಯ ಪದರಗಳು - ತೊಗಟೆ (ಹೊರಪದರ) ಕವಚ (ಮಧ್ಯಂತರ ಪದರ), ಗರ್ಭ, ಕೇಂದ್ರ ಪದರ

35. ರಾಡ್‌ಕ್ಲಿಫ್ ರೇಖೆ ಯಾವ ದೇಶಗಳ ಪ್ರಮುಖ ಗಡಿರೇಖೆ? - ಭಾರತ - ಪಾಕಿಸ್ತಾನ

36. ' ಡ್ಯೂರಾಂಡ್ ರೇಖೆ ' ಯಾವ ದೇಶಗಳ ಪ್ರಮುಖ ಗಡಿರೇಖೆ? ಭಾರತ - ಅಫ್ಘಾನಿಸ್ತಾನ

37. ಪ್ರಪಂಚದ ಅತಿ ಎತ್ತರವಾದ ಶಿಖರ ಯಾವುದು? - ಮೌಂಟ್ ಎವರೆಸ್ಟ್

38. ಭೂಮಿಯಿಂದ ನಕ್ಷತ್ರಗಳ ದೂರವನ್ನು ಅಳೆಯಲು ಬಳಸುವ ಮಾನದಂಡ - ಜ್ಯೋತಿರ್ವಷ್ರ

39. . . . . ಬುರ್ಜಿಲ್ ಮತ್ತು ಜೋಜಿಲ್ ಕಣಿವೆ ಮಾರ್ಗ ಕಂಡು ಬರುವ ರಾಜ್ಯ ಯಾವುದು ? - ಜಮ್ಮು ಮತ್ತು ಕಾಶ್ಮೀರ

40. ಬಂಗಾಳದ ಕಲಿಂಪಾಂಗ್ ಹಾಗೂ ಟಿಬೆಟಿನ ಕ್ಷಾಸಾಗಳನ್ನು ಸಂಪರ್ಕಿಸುವ ಹೆದ್ದಾರಿಯನ್ನು ಯಾವ ಕಣಿವೆ ಮಾರ್ಗದಲ್ಲಿ ನಿರ್ಮಿಸಲಾಗಿದೆ. - ಜೆಲ್‌ಪ್ಲಾ

41. ಮಸ್ತೂರಿ ಮತ್ತು ನೈನಿತಾಲ್ ಇರುವ ರಾಜ್ಯ - ಉತ್ತರಾಖಂಡ

42. ಡಾರ್ಜಿಲಿಂಗ್ ಇರುವ ರಾಜ್ಯ - ಪಶ್ಚಿಮ ಬಂಗಾಳ

43. ದಾಲ್ ಸರೋವರ ಇರುವ ರಾಜ್ಯ - ಜಮ್ಮು ಮತ್ತು ಕಾಶ್ಮೀರ

44. ' ಟೀ ' ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವ ರಾಷ್ಟ್ರ - ಭಾರತ

45. ಅತಿ ಹೆಚ್ಚು ಶಕ್ತಿಯನ್ನು ಯಾವುದರಿಂದ ಉತ್ಪಾದಿಸಲಾಗುತ್ತಿದೆ? - ಶಾಖೋತ್ಪನ್ನ

46. ಕಪ್ಪು ಮಣ್ಣು ಯಾವ ಬೆಳೆಗೆ ಸೂಕ್ತ - ಹತ್ತಿ

47. ಮಾನಸ ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ? - ಅಸ್ಸಾಂ

48. ಕೂರ್ಬಾ (ಆಸ್ಟ್ರೇಲಿಯಾ) ನಗರವು ಪ್ರಸಿದ್ಧವಾಗಿರುವುದು - ಅಲ್ಯೂಮಿನಿಯಂ ಕೈಗಾರಿಕೆಗೆ

49. ಶಿಂಪ್ಲಿ ಪಾಲ ವ್ಯಾಘ್ರ ಯೋಜನೆ ಇರುವ ರಾಜ್ಯ - ಓರಿಸ್ಸಾ

50. ಲಿಗ್ನೆಟ್ ಉತ್ಪಾದನೆಯಲ್ಲಿ ತಮಿಳುನಾಡಿನ ನಂತರ ಯಾವ ರಾಜ್ಯ ಉತ್ಪಾದಿಸುತ್ತಿದೆ? - ಗುಜರಾತ್

51. ' ರೋಹಿ ' ನ್ಯಾಷನಲ್ ಪಾರ್ಕ್ ಯಾವ ರಾಜ್ಯದಲ್ಲಿದೆ? – ಹಿಮಾಚಲ ಪ್ರದೇಶ

52. ಯಾವ ರಾಜ್ಯ ಅತಿ ಹೆಚ್ಚು ಕ್ರಿಶ್ಚಿಯನ್ನರನ್ನು ಹೊಂದಿದೆ? - ನಾಗಾಲ್ಯಾಂಡ್

53. ' ಹಸಿರುಕ್ರಾಂತಿ ' ಯಾವ ಬೆಳೆಯಿಂದ ಪ್ರಾರಂಭವಾಯಿತು? - ಗೋಧಿ

54. ನರ್ಮದಾ ನದಿ ಹರಿಯುವ ದಿಕ್ಕು - ಪಶ್ಚಿಮ

55. ಥಾರ್ ಮರುಭೂಮಿ ಇರುವ ರಾಜ್ಯ - ರಾಜಸ್ತಾನ್

56. , ಮೌಂಟ್ ಅಬು ಗಿರಿಧಾಮವಿರುವ ರಾಜ್ಯ - ರಾಜಸ್ತಾನ್

57. ಮಾಳವ ಪ್ರಸ್ಥಭೂಮಿ ಹೆಚ್ಚು ಆವರಿಸಿರುವ ರಾಜ್ಯ - ಮಧ್ಯಪ್ರದೇಶ

58. ಪೂರ್ವಘಟ್ಟಗಳಲ್ಲಿ ಅತಿ ಎತ್ತರವಾದ ಶಿಖರ ಯಾವುದು? - ಆರ್ಮಕೊಂಡ

59. ಪರಿಸರದಲ್ಲಿರುವ ಎರಡು ವಿಧಗಳು - ಪ್ರಾಕೃತಿಕ ಪರಿಸರ ಮತ್ತು ಮಾನವ ನಿರ್ಮಿತ ಪರಿಸರ

60. ಭಾರತದ ಅತಿ ದೊಡ್ಡ ಸರೋವರ ಯಾವುದು? – ಚಿಲ್ಕಾ (ಒರಿಸ್ಸಾ)

61. ' ಚಿಲ್ಕಾ ಸರೋವರ ಯಾವ ರಾಜ್ಯದಲ್ಲಿದೆ? - ಒರಿಸ್ಸಾ

62. ಯಾವ ಸರೋವರವನ್ನು ಶ್ರೀ ಹರಿಕೋಟಾ ದ್ವೀಪ ' ಎಂದು ಕರೆಯಲಾಗಿದೆ – ಪುಲಿಕಾಟ್

63. 'ಜೋಗ್ ಜಲಪಾತ'ವಿರುವ ರಾಜ್ಯ ಯಾವುದು? - ಕರ್ನಾಟಕ

64. ಭಾರತದ ಏಕೈಕ ಸಜೀವ ಜ್ವಾಲಾಮುಖಿ ಯಾವುದು? - ಬ್ಯಾರನ್

65. ಭಾರತದ ಅತ್ಯಂತ ದಕ್ಷಿಣದ ಭಾಗ ಯಾವುದು? – ಇಂದಿರಾಪಾಯಿಂಟ್

66. ಭಾರತವು ಹೊಂದಿರುವ ವಾಯುಗುಣ ಯಾವುದು? – ಉಷ್ಣವಲಯದಮಾನ್ಸೂನ್ವಾಯುಗುಣ

67. ಭಾರತದ ಗರಿಷ್ಠ ಉಷ್ಣಾಂಶವನ್ನು ಹೊಂದಿರುವ ಪ್ರದೇಶ. - ಗಂಗಾನಗರ 52 C

68. 'ಸುಂಟರ ಗಾಳಿ'ಯನ್ನು ಉತ್ತರ ಪ್ರದೇಶದಲ್ಲಿ ಏನೆಂದು ಕರೆಯುವರು? - ಆಂಧೀಸ್

69. ಭಾರತವು ತನ್ನ ಶೇ. 75 ರಷ್ಟು ಮಳೆಯನ್ನು ಯಾವ ಕಾಲದಲ್ಲಿ ಪಡೆಯುತ್ತದೆ. - ನೈರುತ್ಯ ಮಾನ್ಸೂನ್ ಮಾರುತಗಳ ಕಾಲ ಜೂನ್ -ಸೆಪ್ಟೆಂಬರ್

70. ದಕ್ಷಿಣ ಭಾರತದ ಚಿರಾಪುಂಜಿಯೆಂದು ಯಾವುದನ್ನು ಕರೆಯಲಾಗಿದೆ? - ಆಗುಂಬೆ

71. ಮ್ಯಾಂಗನಿಸ್ ಉತ್ಪಾದನೆಯಲ್ಲಿ ಮೊದಲನೆ ಸ್ಥಾನದಲ್ಲಿರುವ ರಾಜ್ಯ - ಒರಿಸ್ಸಾ

72. ಕರ್ನಾಟಕದ ಯಾವ ಜಿಲ್ಲೆ ಮ್ಯಾಂಗನಿಸ್‌ನ ಉತ್ಪಾದನೆಯಲ್ಲಿ ಮೊದಲನೇ ಸ್ಥಾನದಲ್ಲಿದೆ? – ಬಳ್ಳಾರಿ.

73. 20 ನೆಯ ಶತಮಾನದ ಆಶ್ಚರ್ಯದ ಲೋಹವೆಂದು ಯಾವುದನ್ನು ಕರೆಯಲಾಗಿದೆ? – ಬಾಕ್ಸೈಟ್.

74. ಭಾರತದಿಂದ ಬಾಕ್ಸೈಟನ್ನು ಆಮದು ಮಾಡಿಕೊಳ್ಳುವ ರಾಷ್ಟ್ರ ಯಾವುದು? - ಇಟಲಿ

75. ಅಭ್ರಕದ ಉತ್ಪಾದನೆ ಮತ್ತು ನಿಕ್ಷೇಪದಲ್ಲಿ ಮೊದಲ ಸ್ಥಾನ ಪಡೆದ ರಾಜ್ಯ ಯಾವುದು? – ಆಂದ್ರಪ್ರದೇಶ

76. ಭಾರತದಿಂದ ಅತಿ ಹೆಚ್ಚು ಅಭ್ರಕವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರ ಯಾವುದು? – ಅಮೇರಿಕ

77. ಭಾರತದಲ್ಲೇ ಅತಿ ಹೆಚ್ಚು ಚಿನ್ನ ಉತ್ಪಾದಿಸುವ ರಾಜ್ಯ ಯಾವುದು? - ಕರ್ನಾಟಕ.

78. ರಾಜಸ್ತಾನದ ' ಖೇತ್ರಿ ' ಯಾವುದಕ್ಕೆ ಪ್ರಾಮುಖ್ಯತೆ ಪಡೆದಿದೆ? – ತಾಮ್ರ.

79. ಕಲ್ಲಿದ್ದಲಿನ ಅತ್ಯುತ್ತಮ ದರ್ಜೆ ಯಾವುದು? – ಆಂಥ್ರಸೈಟ್.

80. ಭಾರತದಲ್ಲಿ ಅತಿ ಹೆಚ್ಚಾಗಿ ಕಲ್ಲಿದ್ದಲನ್ನು ಉತ್ಪಾದಿಸುವ ರಾಜ್ಯ - ಮದ್ಯಪ್ರದೇಶ.

81. ಒರಿಸ್ಸಾದ ಅತಿ ಮುಖ್ಯ ಕಲ್ಲಿದ್ದಲಿನ ಕ್ಷೇತ್ರ ಯಾವುದು? – ತಲ್ಚೇರ್.

82. ಭಾರತದ ಅತಿ ಮುಖ್ಯ ಕಲ್ಲಿದ್ದಲಿನ ಕೇಂದ್ರ ಯಾವುದು? – ರಾಣಿಗಂಜ್.

83. ಯಾವ ರಾಜ್ಯದಲ್ಲಿ ಮೊದಲು ಪೆಟ್ರೋಲಿಯಂ ಉತ್ಪಾದನೆಗೊಂಡಿತು? – ಅಸ್ಸಾಂ

84. ಗುಜರಾತಿನಲ್ಲಿ ಮೊದಲು ತೈಲಬಾವಿಯನ್ನು ಎಲ್ಲಿ ಕೊರೆಯಲಾಯಿತು? – ಅಂಕಲೇಶ್ವರ.

85. 'ಬಾಂಬೆ ಹೈ'ನಲ್ಲಿ ಪೆಟ್ರೋಲಿಯಂ ಉತ್ಪಾದನೆ ಯಾವಾಗ ಆರಂಭಗೊಂಡಿತು? 1976

86. ಭಾರತದಲ್ಲೇ ಅತಿ ಹೆಚ್ಚು ಕಚ್ಚಾ ತೈಲವನ್ನು ಉತ್ಪಾದಿಸುವ ಸ್ಥಳ ಯಾವುದು? – ಬಾಂಬೆಹೈ.

87. ಭಾರತದಲ್ಲಿ ಅತಿ ಹೆಚ್ಚು ಸ್ವಾಭಾವಿಕ ಅನಿಲವನ್ನು ಉತ್ಪಾದಿಸುವ ಸ್ಥಳ ಯಾವುದು ? – ಅಂಕಲೇಶ್ವರ.

88. ' ದಿಗ್ಛೊಯಿ' ತೈಲ ಶುದ್ದೀಕರಣ ಕೇಂದ್ರ ಯಾವಾಗ ಸ್ಥಾಪನೆಗೊಂಡಿತು? – ಕ್ರಿ.ಶ. 1893

89. ಸವನ್ನಾಗಳೆಂದರೆ – ಉಷ್ಣವಲಯದಹುಲ್ಲುಗಾವಲುಗಳು

90. ಭಾರತದಲ್ಲಿ ಅತಿ ಹೆಚ್ಚು ಜಲವಿದ್ಯುತ್‌ ಉತ್ಪಾದಿಸುವ ರಾಜ್ಯ ಯಾವುದು? – ಆಂದ್ರಪ್ರದೇಶ.

91. ಶಿವನ ಸಮುದ್ರದಲ್ಲಿ ಯಾವ ವರ್ಷ ವಿದ್ಯುತ್ ಪ್ರಾರಂಭವಾಯಿತು? – ಕ್ರಿ.ಶ. 1902

93. ಭಾರತದ ಮೊದಲ ಜಲವಿದ್ಯುತ್ ಯೋಜನೆ ಯಾವುದು? – ಶಿವನ ಸಮುದ್ರ

94. ಕೊಯ್ತಾ ಜಲವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ? - ಮಹಾರಾಷ್ಟ್ರ

95. ' ಕಕ್ರಪಾರ ಜಲವಿದ್ಯುತ್ ಯೋಜನೆ ಯಾವ ರಾಜ್ಯದಲ್ಲಿದೆ? - ಗುಜರಾತ್

96. ಬಿಹಾರ ರಾಜ್ಯದ ಜಲವಿದ್ಯುತ್ ಯೋಜನೆ ಯಾವುದು? ಸುವರ್ಣರೇಖಾ ಯೋಜನೆ

97. ನಾಗಾಲ್ಯಾಂಡ್ ರಾಜಧಾನಿ ಯಾವುದು? - ಕೊಹಿಮ

98. ಯುರೇನಿಯಂ ಅತಿ ಹೆಚ್ಚಾಗಿ ಉತ್ಪಾದಿಸುವ ರಾಷ್ಟ್ರ - ಕೆನಡಾ

99. ಭಾರತದ ಮೊದಲ ಅಣುವಿದ್ಯುತ್ ಕೇಂದ್ರ ಯಾವಾಗ ಸ್ಥಾಪನೆಗೊಂಡಿತು? - 1969

100. ಭಾರತದ ಮೊದಲ ಅಣುವಿದ್ಯುತ್ ಕೇಂದ್ರವು ಯಾವ ಸ್ಥಳದಲ್ಲಿ ಸ್ಥಾಪನೆಗೊಂಡಿತು? - ತಾರಾಪುರ

101. ಕಲ್ಪಾಕ್ಕಂ ಯಾವ ರಾಜ್ಯದಲ್ಲಿದೆ? - ತಮಿಳುನಾಡು

102. ' ನರೋರ ' ಯಾವ ರಾಜ್ಯದಲ್ಲಿದೆ? – ಉತ್ತರ ಪ್ರದೇಶ

103. ' ಕೈಗಾ ಅಣುಸ್ಥಾವರ ' ಯಾವ ಜಿಲ್ಲೆಯಲ್ಲಿದೆ? - ಉತ್ತರ ಕನ್ನಡ

104. ಸೌರಶಾಖವನ್ನು ಅತಿ ಹೆಚ್ಚಾಗಿ ಉತ್ಪಾದಿಸುವ ರಾಜ್ಯ ಯಾವುದು? - ರಾಜಸ್ಥಾನ

105. ದೇಶದಲ್ಲಿಯೇ ಅತಿ ಹೆಚ್ಚು ಗಾಳಿಯ ವಿದ್ಯುತ್ತನ್ನು ಉತ್ಪಾದಿಸುವ ರಾಜ್ಯ? - ತಮಿಳುನಾಡು

106. ಭಾರತದಲ್ಲಿ ಅತಿ ಹೆಚ್ಚು ಕಾಗದ ಉತ್ಪಾದಿಸುವ ರಾಜ್ಯ ಯಾವುದು? - ಮಹಾರಾಷ್ಟ್ರ

107. ಸಮಾಚಾರ ಪತ್ರಿಕೆಗಳಿಗೆ ಬೇಕಾದ ನ್ಯೂಸ್ ಪ್ರಿಂಟ್ ಕಾಗದ ಯಾವ ರಾಜ್ಯದಲ್ಲಿ ಉತ್ಪಾದನೆಯಾಗುತ್ತದೆ? - ನೇಫಾನಗರ (ಮಧ್ಯಪ್ರದೇಶ)

108. ಭಾರತದ ಆಧುನಿಕ ಹಡಗು ನಿರ್ಮಾಣವು ಯಾವ ಸ್ಥಳದಿಂದ ಪ್ರಾರಂಭಗೊಂಡಿತು? - ವಿಶಾಖಪಟ್ಟಣ

109. ಸೂರ್ಯನು ಗೆಲಾಕ್ಸಿಯನ್ನು ಸುತ್ತಲು ತೆಗೆದುಕೊಳ್ಳುವ ದಿನಗಳು - 200

110. ' ಮಜಗಾಂ ' ಹಡಗು ನಿರ್ಮಾಣ ಕೇಂದ್ರವಿರುವ ರಾಜ್ಯ? - ಮಹಾರಾಷ್ಟ್ರ

111. ಭಾರತದ ಅತೀ ಆಳವಾದ ಬಂದರು ಯಾವುದು? - ವಿಶಾಖಪಟ್ಟಣ

112. ಭಾರತದ ಮೊದಲ ರೈಲು ಸಂಚಾರ ಯಾವ ನಗರಗಳಲ್ಲಿ ಸಂಚರಿಸಿತು? - (1853) ಮುಂಬೈ - ಥಾಣಾ

113. ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸಂಗಮದ ಉನ್ನತ ಶಿಖರ ದೊಡ್ಡ ಬೆಟ್ಟ

114. ಭಾರತದ ಅತಿ ಚಿಕ್ಕ ರೈಲ್ವೆ ವಲಯ ಯಾವುದು? - ಈಶಾನ್ಯ

115. ಭಾರತದ ಉದ್ದವಾದ ರೈಲು ಮಾರ್ಗ ಯಾವುದು? - ಕನ್ಯಾಕುಮಾರಿ - ಜಮ್ಮುತಾವಿ

116. ಅತಿ ಉದ್ದವಾದ ರೈಲುಮಾರ್ಗದಲ್ಲಿ ಓಡಾಡುವ ರೈಲಿನ ಹೆಸರೇನು? - ಹಿಮಸಾಗರ ಎಕ್ಸ್‌ಪ್ರೆಸ್‌

117. ರಸ್ತೆ ಅಭಿವೃದ್ಧಿ ಮಂಡಳಿ ಸ್ಥಾಪನೆಗೊಂಡ ವರ್ಷ - 1927

118. ಹೈದರಾಬಾದ್‌ ಯೋಜನೆ ಯಾವಾಗ ಪ್ರಾರಂಭಗೊಂಡಿತು? - 1961

119. ರಾಷ್ಟ್ರೀಯ ಹೆದ್ದಾರಿಗಳೆಂದು ಕರೆದ ವರ್ಷ? -1956

120. ಭಾರತದಲ್ಲಿ ಅತಿ ಹೆಚ್ಚು ಉದ್ದವಾದ ರಾಷ್ಟ್ರೀಯ ಹೆದ್ದಾರಿಯನ್ನು ಹೊಂದಿರುವ ರಾಜ್ಯ - ಮಹಾರಾಷ್ಟ್ರ

121. ಪ್ರಪಂಚದ ಅತಿ ಎತ್ತರದ ವಾಹನ ಸಂಚಾರ ರಸ್ತೆಮಾರ್ಗ ಯಾವುದು? - ಮನಾಲಿ - ಲೈ

122. ಅತೀ ಕಡಿಮೆ ರಸ್ತೆ ಮಾರ್ಗವನ್ನು ಹೊಂದಿರುವ ರಾಜ್ಯ - ಸಿಕ್ಕಿಂ

123. ಒಳನಾಡು ಜಲಮಾರ್ಗ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೊಂಡದ್ದು - 1986

124. ' ಕಾಂಡ್ಲಾ ' ಬಂದರು ಯಾವ ರಾಜ್ಯದಲ್ಲಿದೆ? - ಗುಜರಾತ್ – 1927

125. ಭಾರತದ ಅತಿ ದೊಡ್ಡ ಬಂದರು ಯಾವುದು? – ಬೊಂಬಾಯಿ.

126. ನೇತಾಜಿ ಸುಭಾಷ್ ಹಡಗು ಕಟ್ಟೆ ಇರುವ ಬಂದರು? – ಕೊಲ್ಕತ್ತಾ.

127. ಸ್ವಾಭಾವಿಕ ಬಂದರು ಯಾವುದು? – ಕೊಚ್ಚಿನ್.

128. ' ಕಾಂಡ್ಲಾ ಪ್ರಧಾನ ಬಂದರು ' ಎನಿಸಿದ್ದು ಯಾವಾಗ? - 1955

129. ಪಾರಾದೀಪ್ ಬಂದರು ಉದ್ಘಾಟನೆಗೊಂಡ ವರ್ಷ - 1966

130. ' ಹೂಳೆತ್ತುವ ಕಾರ್ಪೊರೇಷನ್ ಯಾವಾಗ ಸ್ಥಾಪನೆಗೊಂಡಿತು? - 1976

131. ಭಾರತದಲ್ಲಿ ವಾಯು ಸಾರಿಗೆ ಯಾವಾಗ ಆರಂಭಗೊಂಡಿತು? - 1911

132. ನಾಗರಿಕ ವಿಮಾನ ಇಲಾಖೆಯು ಸ್ಥಾಪನೆಗೊಂಡ ವರ್ಷ - 1927

133. ಭಾರತದಲ್ಲಿ ಎಷ್ಟು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿವೆ? - 7

134. ಇಂದಿರಾಗಾಂಧಿ ವಿಮಾನ ನಿಲ್ದಾಣ ಎಲ್ಲಿದೆ? - ದೆಹಲಿ

135. ' ಸಂತಾಲ' ಬುಡಕಟ್ಟು ಹೆಚ್ಚಾಗಿ ಇರುವ ರಾಜ್ಯ - ಬಿಹಾರ

136. ಅತಿ ಹೆಚ್ಚು ಮಳೆ ಪಡೆಯುವ ರಾಜ್ಯ – ಮೇಘಾಲಯ.

137. ' ಮಧುಮಲೆ ' ಇರುವ ರಾಜ್ಯ – ತಮಿಳುನಾಡು.

138. ದಕ್ಷಿಣ ಭಾರತದಲ್ಲೇ ಪೂರ್ವ ತೀರದಲ್ಲಿರುವ ಅತಿ ದೊಡ್ಡ ಬಂದರು – ಚೆನ್ನೈ.

139. ಕಾಫಿ ತೋಟಗಳಲ್ಲಿ ಉಪ ಬೆಳೆಯಾಗಿ ಬೆಳೆಯುವ ಕರ್ನಾಟಕದ ಪ್ರಸಿದ್ಧ ಸಾಂಬಾರು ಬೆಳೆ ಯಾವುದು? - ಮೆಣಸು

140. ಶಿವನಸಮುದ್ರ ವಿದ್ಯುದಾಗರಕ್ಕೆ ಯಾರ ಹೆಸರನ್ನು ಇಡಲಾಗಿದೆ - ಶೇಷಾದ್ರಿ ಅಯ್ಯರ್

141. ಭಾರತದ ಪ್ರಪ್ರಥಮ ಜಲವಿದ್ಯುತ್ ಕೇಂದ್ರಕ್ಕೆ ಮತ್ತೊಂದು ಹೆಸರು? - ಬ್ಲಫ್

142. ಜವಳಿ ಉದ್ಯಮಕ್ಕೆ ಕರ್ನಾಟಕದ ಜಿಲ್ಲೆ ಪ್ರಸಿದ್ಧವಾಗಿದೆ? - ದಾವಣಗೆರೆ

143. ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯುವ ಬಂದರು? - ಮಂಗಳೂರು

144. ಆಗುಂಬೆಯ ನಂತರ ಅತಿ ಹೆಚ್ಚು ಮಳೆ ಪಡೆಯುವ ಸ್ಥಳ ಯಾವುದು? - ಭಾಗಮಂಡಲ

145. ' ಅಣಸಿ ರಾಷ್ಟ್ರೀಯ ಉದ್ಯಾನವಿರುವ ಜಿಲ್ಲೆ – ಉತ್ತರಕನ್ನಡ

146. ಆಲಮಟ್ಟಿ ಅಣೆಕಟ್ಟು ಯೋಜನೆ ಇರುವ ಜಿಲ್ಲೆ - ಬಿಜಾಪುರ

147. ಎಮ್ಮೆ ಸಾಕಾಣಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ಜಿಲ್ಲೆ ಯಾವುದು? - ಬೆಳಗಾವಿ

148. ಪವನಶಕ್ತಿ ಪ್ರಥಮ ಸಮೀಕ್ಷೆ ನಡೆದ ಸ್ಥಳ – ಕಪ್ಪತಗುಡ್ಡ.

149. ಬ್ರಾಡ್‌ಗೇಜಿನಲ್ಲಿರುವ ರೈಲು ಹಳಿಗಳ ಅಂತರ – 1676 ಮೀ

150. ಭಾರತದಲ್ಲಿ ಮೊದಲ ಅಂಚೆ ಚೀಟಿ 1937 ರಲ್ಲಿ ಬಿಡುಗಡೆಯಾದುದು - ಕರಾಚಿ

151. ಭಾರತದಲ್ಲಿ ಟೆಲಿ ಪ್ರಿಂಟರ್ ಉತ್ಪಾದಿಸುವ ನಗರ - ಚೆನ್ನೈ

152. ತೋಡ ಬುಡಕಟ್ಟು ಕಂಡುಬರುವುದು? - ತಮಿಳುನಾಡು

153. ಬಿರ್‌ಹೋರ್ ಬುಡಕಟ್ಟು ಇರುವುದು? - ಮದ್ಯಪ್ರದೇಶ

154. ಕಾರ್ಡ್‌ಮ್ ಬೆಟ್ಟಗಳ ಮತ್ತೊಂದು ಹೆಸರು? – ಏಲಾಗಿರಿಬೆಟ್ಟಗಳು

155. ಭಾರತದಲ್ಲಿ ಎಸ್.ಟಿ.ಡಿ. ಆರಂಭವಾದುದು ? - 1960

156. ಭೂಮಿಯ ಹೊರಪದರವನ್ನು ಹೀಗೆ ಕರೆಯುತ್ತಾರೆ? - ಸಿಯಾಲ್

157. V ಆಕಾರದ ಕಣಿವೆ ನಿರ್ಮಿಸುವ ನಗೀಕರಣದ ಕರ್ತೃ – ನದಿಗಳಪ್ರಕ್ರಿಯೆ

158. ಗ್ರಾನೈಟ್, ಗ್ಯಾಬೋ, ಬಸಾಲ್ಟ್ ಈ ಶಿಲೆಗೆ ಉದಾಹರಣೆಗಳು - ಅಗ್ನಿಶಿಲೆಗಳು

159. ಆಮ್ಲಜನಕ, ಸಾರಜನಕ ಮೊದಲಾದ ಅನಿಲಗಳು ಭೂಮಿಯಿಂದ ಎಷ್ಟು ಎತ್ತರದವರೆಗೆ ದೊರೆಯುವುವು. - 6-7 ಮೈಲುಗಳು

160. ಉಷ್ಣತೆಯ ಆಧಾರದ ಮೇಲೆ ಭೂಭಾಗವನ್ನು ಎಷ್ಟು ವಲಯಗಳಾಗಿ ಇಂಗಡಿಸಬಹುದು? - ಮೂರು

161. ವಾಯುಮಂಡಲದ ಎತ್ತರದಲ್ಲಿರುವ ಜೀವರಕ್ಷಕ ಅನಿಲದ ಕವಚ? - ಓಜೋನ್

162. ವಾಯುವಿನ ಒತ್ತಡವನ್ನು ಅಳೆಯುವ ಸಾಧನ - ಬ್ಯಾರೋಮೀಟರ್

163. ಗಾಳಿಯ ಒತ್ತಡವು - ಎಲ್ಲಾ ಕಡೆಯು ಒಂದೇ ಸಮನಾಗಿರುವುದಿಲ್ಲ

164. ಒಂದೇ ಕಾಲದಲ್ಲಿ ಒಂದೇ ಸಮನಾದ ಶಾಖವುಳ್ಳ ಸ್ಥಳಗಳ ಮೂಲಕ ಹಾದು ಹೋಗುವ ಊಹಾ ರೇಖೆಯು? - ಸಮತಾಪ ರೇಖೆ

165. ಒಂದೇ ಪ್ರಮಾಣದ ಉಷ್ಣತೆಯನ್ನು ಹೊಂದಿರುವ ಸ್ಥಳಗಳನ್ನು ನಕಾಶೆಯ ಮೇಲೆ ಗುರುತಿಸಲು ಎಳೆದಿರುವ ರೇಖೆ - ಸಮಭಾರ ರೇಖೆ

166. ಕುದುರೆ ಅಕ್ಷಾಂಶಗಳು ಎಂದು ಕರೆಯಿಸಿಕೊಳ್ಳುವ ಹೆಚ್ಚು ಒತ್ತಡ ಪ್ರದೇಶಗಳು - ಉಪ ಉಷ್ಣವಲಯದ ಪ್ರದೇಶಗಳು

167. ಹೆಚ್ಚು ಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಮಣ್ಣು - ಕಪ್ಪುಮಣ್ಣು

168. ಉದಕ ಮಂಡಲವಿರುವ ಸ್ಥಳ - ನೀಲಗಿರಿ

169. ನಾಗಾಬೆಟ್ಟಗಳು ಇರುವ ಸ್ಥಳ - ಪೂರ್ವಾಚಲ

170. ಕಬ್ಬಿಣದ ಅದಿರಿನಲ್ಲಿರುವ ವಿಧಗಳು - ಮ್ಯಾಗ್ನಿಟೈಟ್, ಹೆಮಟೈಟ್, ಲಿಮೊನೈಟ್, ಸಿಡೆರೈಟ್

171. ಅತ್ಯಂತ ಪ್ರಾಚೀನವಾದ ಲೋಹ - ತಾಮ್ರ

172. ಭಾರತವು ಏಕಸ್ವಾಮ್ಯ ಹೊಂದಿರುವ ಲೋಹ - ಅಭ್ರಕ

173. ಹೆಮಟೈಟ್ ಮತ್ತು ಮ್ಯಾಗ್ನಟೈಟ್‌ಗಳು ಯಾವ ಲೋಹದ ಪ್ರಮುಖ ಅದಿರುಗಳು? - ಕಬ್ಬಿಣ

174. ಮದ್ರಾಸಿನ ಮೊದಲನೆಯ ಸಿಮೆಂಟ್ ಕಾರ್ಖಾನೆಯಲ್ಲಿ ಮೊದಲು ಬಳಸುತ್ತಿದ್ದ ಕಚ್ಚಾವಸ್ತು - ಕಪ್ಪೆಚಿಪ್ಪುಗಳು

175. ಭೂಗೋಳದಲ್ಲಿ ಭೂಮಿಯ ಶೇಕಡಾವಾರು ಪ್ರಮಾಣ - 29 %

176. ಜೀವರಕ್ಷಕ ಅನಿಲ ಓಜೋನ್ ವಿರುವ ವಲಯ - ವಾಯುಗೋಳ

177. ಭೂಮಿ ಸೂರ್ಯನಿಂದ ಪಡೆಯುವ ಉಷ್ಣಶಕ್ತಿಯೇ - ಸೌರಶಕ್ತಿ

178. ಮಾನವನ ವಾಸಕ್ಕೆ ಪ್ರತಿಕೂಲ ಪರಿಸ್ಥಿತಿ ಒಡ್ಡಿರುವ ಅಮೇಜಾನ್ ಮತ್ತು ಕಾಂಗೊಗಳು ಹರಡಿರುವ ಪ್ರದೇಶ - ಭೂಮಧ್ಯರೇಖೆ

179. ಜಗತ್ತಿನಲ್ಲಿ ಅತಿ ದೊಡ್ಡ ಸಾಗರ - ಪ್ರಶಾಂತ ಸಾಗರ (ಫೆಸಿಪಿಕ್)

180. ಉಕ್ಕಿ ಉಬ್ಬರವಾದ ವಾರದ ನಂತರ ಚಂದ್ರ ಮತ್ತು ಸೂರ್ಯ ಭೂಮಿಗೆ. ದಲ್ಲಿರುತ್ತದೆ . ಅಸಮಕೋನ

181. ಭೂಮಿಯ ಒಟ್ಟು ಜಲರಾಶಿಯಲ್ಲಿ ಸಾಗರ ಸಮುದ್ರದಲ್ಲಿರುವ ಶೇಕಡ ಪ್ರಮಾಣ - ಶೇ. 86

182. ಕಿಂಬರ್ಲಿ ಪ್ರಪಂಚದಲ್ಲೇ ಹೆಸರುವಾಸಿಯಾಗಿರುವುದು - ವಜ್ರದ ಗಣಿಗಾರಿಕೆ

183. ದಕ್ಷಿಣ ಬ್ರೆಜಿಲ್‌ನಲ್ಲಿರುವ ಉಷ್ಣವಲಯದ ಹುಲ್ಲುಗಾವಲನ್ನು..... ಎಂದು ಕರೆಯುತ್ತಾರೆ - ಪಂಪಾಸ್

184. ಎಸ್ಕಿಮೋ ಜನರ ಪ್ರಮುಖ ಉದ್ಯೋಗ - ಬೇಟೆಯಾಡುವುದು ಮತ್ತು ಮೀನುಗಾರಿಕೆ

185. ಬಿಳಿಗಿರಿ ರಂಗನಬೆಟ್ಟದ ತಪ್ಪಲಲ್ಲಿ ಇರುವ ಆದಿವಾಸಿ ಜನಾಂಗ - ಸೋಲಿಗ

186. ಮಾನಸೂನ್ ಎಂದರೆ - ಸೋಲಿಗ - (ಕಾಲ) ಋತು

187. ಏಷ್ಯಾದಲ್ಲಿ ಕೈಗಾರಿಕೆಯಲ್ಲಿ ಮುಂದುವರಿದ ರಾಷ್ಟ್ರ - ಜಪಾನ್

188. ಅಮೆರಿಕಾ ಸಂಯುಕ್ತ ಸಂಸ್ಥಾನದ ಈಶಾನ್ಯಭಾಗ - ಸೆಂಟ್‌ಲಾರೆನ್ಸ್ ಕೊಳ್ಳ ಪ್ರದೇಶ

189. ಈಶಾನ್ಯ ಚೈನ, ಸೈಬೀರಿಯಾ, ಜಪಾನ್ -55⁰ - 70⁰ಉ

190. ಒಳನಾಡಿನ ಜಲಸಾರಿಗೆ ಪ್ರಾಧಿಕಾರ ಸ್ಥಾಪಿಸಿದ ವರ್ಷ - 1985

191. ಪಶ್ಚಿಮ ಬಂಗಾಳದ ಕುಬ್ಬಿ ಬಿಲಾಯ್ ಮತ್ತು ರೊಲಾದಲ್ಲಿ ಸ್ಥಾಪಿಸಿದ ಕಾರ್ಖಾನೆಗಳು ಯಾವುದಕ್ಕೆ ಸಂಬಂಧಿಸಿದೆ? - ಉಕ್ಕು

192. ನಿರಂತರವಾಗಿ, ವಿಫುಲವಾಗಿ ದೊರೆಯುವ ಶಕ್ತಿಯ ಮೂಲ - ಸೌರಶಕ್ತಿ

193. ಭಾರತದ ಮೊಟ್ಟಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರವನ್ನು ಯಾವ ವರ್ಷ ನಿರ್ಮಿಸಲಾಯಿತು? - 1902

194. ಭಾರತದ ಮೊದಲನೆಯ ಸೆಣಬಿನ ಗಿರಣಿ ಸ್ಥಾಪಿಸಿದ ಸ್ಥಳ - ರಿಶ್ರಾ (ಪ.ಬಂ.)

195. ರೈಲು ಪ್ರಯಾಣಿಕ ಡಬ್ಬಿ ತಯಾರಿಸುವ ಸ್ಥಳ - ಪೆರಂಬೂರು

196. ಜಲವಿದ್ಯುಚ್ಛಕ್ತಿಯನ್ನು ಮೊದಲು ಕಂಡುಹಿಡಿದವರು – ಲಾರ್ಡ್ಆರ್ಮಸ್ಟ್ರಾಂಗ್

197. ಜೆಮ್‌ಷೆಡ್‌ಪುರದ ಟಾಟಾರವರ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಿದ ವರ್ಷ - 1907

198. ಬೊಂಬಾಯಿಯಲ್ಲಿ ಮೊದಲ ಹತ್ತಿ ಗಿರಣಿ ಕೈಗಾರಿಕೆಯನ್ನು ಪ್ರಾರಂಭಿಸಿದ ವರ್ಷ – 1954

199. ಭತ್ತದ ಉತ್ಪಾದನೆಯಲ್ಲಿ ಜಗತ್ತಿನಲ್ಲಿ ಭಾರತದ ಸ್ಥಾನ - ದ್ವಿತೀಯ

200. ಭಾರತದಲ್ಲಿ ಕಾಫಿಯನ್ನು ಹೆಚ್ಚಾಗಿ ಬೆಳೆಯುವ ರಾಜ್ಯ - ಕರ್ನಾಟಕ

201. 23 ½ ° ಯಿಂದ 66 ½ ° ವರೆಗಿನ ಪ್ರದೇಶವನ್ನು – ಸಮಶೀತೋಷ್ಣವಲಯ

202. ಕಲ್ಲಿದ್ದಲಿನಲ್ಲಿರುವ ವಿಧಗಳು - ಆಂತ್ರಾಸೈಟ್, ಬಿಟುಮಿನಸ್, ಲಿಗ್ನೆಟ್, ಪೀಟ್

203. ಸೂಚಿಪರ್ಣ ಅರಣ್ಯಗಳು ಕಂಡುಬರುವ ಪ್ರದೇಶಗಳು ಯು.ಎಸ್.ಎ, ನಾರ್ವೆ, ಸ್ವೀಡನ್, ಸೈಬೀರಿಯಾ

204. ಕಬ್ಬಿಣ, ಪೊಟ್ಯಾಶಿಯಂ, ಕ್ಯಾಲ್ಸಿಯಂ, ಗಂಧಕ, ರಂಜಕ, ತಾಮ್ರ ಮುಂತಾದ ಖನಿಜಗಳನ್ನು ಹೊಂದಿರುವ ಮಣ್ಣು - ಜೇಡಿಮಣ್ಣು

205. ಮಣ್ಣು ಒಳಗೊಂಡಿರುವ ನಾಲ್ಕು ವಿಧಗಳು -1. ಸಿಲಿಕಾ , 2. ಜೇಡಿ , 3. ಸುಣ್ಣ , 4. ಕೊಳೆತ ಸತ್ಯಾಂಶ

206. ನಕಾಶೆ ಎಂಬ ಶಬ್ದದ ಮೂಲವು ಲ್ಯಾಟಿನ್ ಭಾಷೆಯ ಯಾವ ಪದದಿಂದ ಬಂದಿದೆ? – ಮ್ಯಾಪ್ಟಾ.

207. ಉಬ್ಬರವಿಳಿತ ತಿಳಿಯಲು ಉಪಯೋಗಿಸುವ ಮಾಪಕ. - ಭರತಮಾಪಕ

208. ಅಟ್ಲಾಂಟಿಕ್ ಸಾಗರದಲ್ಲಿರುವ ಉದ್ಯೋದಕ ಪ್ರವಾಹಗಳು - ಪ್ಲಾರಿಡಾ ಪ್ರವಾಹ, ಗಲ್ಫ್ ಸ್ಟೀಮ್ ಪ್ರವಾಹ, ಕ್ಯಾನರೀಸ್ ಪ್ರವಾಹ, ನಾರ್ವೆಜಿಯನ್ ಪ್ರವಾಹ

209. ಸಾಗರ ಪ್ರವಾಹದಲ್ಲಿರುವ ಎರಡು ಭಾಗಗಳು - ಉಷ್ಣೋದಕ ಪ್ರವಾಹ, ಶೀತೋದಕ ಪ್ರವಾಹ

210. ಪ್ರಪಂಚದಲ್ಲಿ ಅತಿ ಹೆಚ್ಚು ಲವಣಯುಕ್ತವಾದ ಸಮುದ್ರ - ಮೃತ ಸಮುದ್ರ

211. ಗ್ರೀನ್‌ವಿಚ್ ರೇಖೆಯಿಂದ ಪೂರ್ವಕ್ಕೆ ಇರುವ ರೇಖಾಂಶಗಳು ಮುಂಚಿತವಾಗಿ ಸೂರ್ಯನ ಎದುರಿಗೆ ಬರಲು ಕಾರಣ - ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ತಿರುಗುತ್ತದೆ

212. ಭಾರತದ ಪ್ರಮಾಣಿತ ವೇಳೆಯನ್ನು ನಿರ್ಧರಿಸುವ ರೇಖಾಂಶ - ಅಲಹಾಬಾದ್ ಸಮೀಪದ 82 ½ ° ರೇಖಾಂಶ

213. 180° ರೇಖಾಂಶವನ್ನು ಅಂತರಾಷ್ಟ್ರೀಯ ದಿನರೇಖೆ ಎಂದು ಅಂಗೀಕರಿಸಿದ್ದು - 1884 ರಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ

214. ಜೀವ ಪರಿಸರ ಶಾಸ್ತ್ರ ಎಂಬ ಪದವನ್ನು ಪರಿಚಯಿಸಿದವರು - ಜರ್ಮನಿಯ ಜೀವಶಾಸ್ತ್ರಜ್ಞ ಅರ್ನೆಸ್ ಪ್ಯಾಕಲ್ (1869)

215. ಪರಿಸರ ಮಾಲಿನ್ಯದ ನಾಲ್ಕು ವಿಧಗಳು - ವಾಯುಮಾಲಿನ್ಯ, ಜಲಮಾಲಿನ್ಯ, ಮಣ್ಣಿನ ಮಾಲಿನ್ಯ, ಶಬ್ದ ಮಾಲಿನ್ಯ

216. ಉತ್ತರ ಗೋಳಾರ್ಧದಲ್ಲಿ ಗಾಳಿಗಳು ತಮ್ಮ ಬಲಗಡೆಗೂ ದಕ್ಷಿಣ ಗೋಳಾರ್ಧದಲ್ಲಿ ತಮ್ಮ ಎಡಗಡೆಗೂ ಓರೆಯಾಗಿ ಬೀಸುತ್ತವೆ ಎಂಬ ವಿಷಯ ತಿಳಿಸುವ ನಿಯಮ - ಫೆರಲ್ಸ್ ನಿಯಮ

217. ಪ್ರಪಂಚದ ಅತ್ಯಂತ ವಿಶಾಲವಾದ ಲೋಯಸ್ ಮೈದಾನವಿರುವುದು - ಚೀನಾದಲ್ಲಿ

218. ಜಾಗೃತ ಜ್ವಾಲಾಮುಖಿ ಇರುವ ಪ್ರದೇಶಗಳು - ಆಂಡೀಸ್ ಪರ್ವತದಲ್ಲಿಯ ಇಟಲಿ ದೇಶದ ಕೊಟೋಪಾಕಿ, ಮೆಕ್ಸಿಕೋದ ಪಾರಿಕುಟಿನ್, ಇಟಲಿಯ ವೆಸುವಿಯಸ್, ಲಿಪಾರಿ ದ್ವೀಪದ (ಮೆಡಿಟರೇನಿಯನ್ ಸಮುದ್ರ) ಸ್ಪ್ಯಾಂಬೋಲ್

219. ಸೂಪ್ತ ಜ್ವಾಲಾಮುಖಿ ಇರುವ ಪ್ರದೇಶ ಅಮೆರಿಕದ ಮೌಂಟ್ ರೇನಿಯರ್, ಕ್ಯಾಲಿಫೋರ್ನಿಯಾದ ಲಾಸ್ಯನ್

220. ನಂದಿದ ಜ್ವಾಲಾಮುಖಿ ಇರುವ ಪ್ರದೇಶ - ವೆಸ್ಟ್ ಇಂಡೀಸ್‌ನ ಶಿಲೆ, ದಕ್ಷಿಣ ಅಮೆರಿಕಾದ ಚಿಂಬೊರೋಸೋ

221. ಭಾರತ ಹೊಂದಿರುವ ಏಕೈಕ ಸಜೀವ ಜ್ವಾಲಾಮುಖಿ - ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿರುವ ಬ್ಯಾರನ್ ದ್ವೀಪ

222. ವಾಯುಗೋಳದ ಅತ್ಯಂತ ಕೆಳಸ್ತರ - ಪರಿವರ್ತನ ವಲಯ (12 ಕಿ.ಮೀ .ವರೆಗೆ ಇದೆ.)

223. ಭೂಮಿಯ ಮೇಲೆ ವಿವಿಧ ಋತುಮಾನಗಳಲ್ಲಿ ಪರಸ್ಪರ ತದ್ವಿರುದ್ಧ ದಿಕ್ಕಿನಲ್ಲಿ ಬೀಸುವ ಮಾರುತಗಳು - ನಿಯ ತಕಾಲಿಕ ಮಾರುತಗಳು ಉದಾ: ಮಾನ್ಸೂನ್ ಮಾರುತಗಳು

224. ಆವರ್ತ ಮಾರುತಗಳು - ಚಕ್ರವರ್ತ ಉತ್ತರ ಗೋಳಾರ್ಧದಲ್ಲಿ ಎಡದಿಂದ ಬಲಕ್ಕೆ, ಪ್ರತ್ಯಾವರ್ತ ದಕ್ಷಿಣಗೋಳಾರ್ಧದಲ್ಲಿ ಬಲದಿಂದ ಎಡಕ್ಕೆ ಬೀಸುತ್ತವೆ.

225. ಆವರ್ತ ಮಾರುತಗಳಿಗೆ ಇರುವ ವಿವಿಧ ಹೆಸರುಗಳು - ಸೈಕ್ಲೋನ್, ಹರಿಕೇನ್, ಟೊರ್ನಾಡೋ, ವಿಲ್ಕವಿಲ್ಲಿ, ಟೈಫೂನ್, ತೂಫಾನ್ ಮತ್ತು ಚಂಡಮಾರುತ

226. ಹೆಚ್ಚು ಒತ್ತಡದ ಒಂದು ಕೇಂದ್ರದಿಂದ ಕಡಿಮೆ ಒತ್ತಡದ ಸುತ್ತಲಿನ ಪ್ರದೇಶಗಳ ಕಡೆಗೆ ಬೀಸುವ ಮಾರುತಗಳು - ಪ್ರತ್ಯಾವರ್ತ ಮಾರುತಗಳು

227. ಪರ್ವತ ಮಾರುತಗಳಿಗೆ ಉದಾ - ಸ್ವಿಜರ್‌ಲ್ಯಾಂಡ್‌ನ ಫಾನ್, ಆಲ್ಟ್ ಬೆಟ್ಟಗಳ ಮಿಸ್ಟೇಲ್ ಪರ್ವತದ ಮಾರುತಗಳು

228. ಭೂ ಭಾಗದೊಳಗೆ ಚಾಚಿಕೊಂಡ ಸಮುದ್ರಗಳು - ಕೊಲ್ಲಿಗಳು

229. ಭೂಭಾಗದೊಳಗೆ ಸಮುದ್ರಗಳ ಕಿರಿದಾಗಿ ಬಹುದೂರ ಚಾಚಿಕೊಂಡಿರುವ ಭಾಗ - ಖಾರಿ

230. ಸಾಗರದಲ್ಲಿ ಎರಡು ಜಲರಾಶಿಗಳನ್ನು ಸೇರಿಸುವ ನೀರಿನ ಕಿರಿದಾದ ಭಾಗ - ಜಲಸಂಧಿ

231. ಶಾಂತಸಾಗರದಲ್ಲಿಯ ಅತ್ಯಂತ ಆಳವಾದ ಕಮರಿ - ಚಾಲೆಂಜರ್ ಕಮರಿ

232. ಸಾಗರದ ನೀರಿನಲ್ಲಿ ಕರಗಿರುವ ಸೋಡಿಯಂ ಕ್ಲೋರೈಡ್‌ನ ಪ್ರಮಾಣ - 85 %

233. ಭೂಮಿಯು ತನ್ನ ಅಕ್ಷದ ಸುತ್ತ ಎಷ್ಟು ಡಿಗ್ರಿ ವಾಲಿದೆ? -23/20

234. ವಿಶ್ವದ ಮೂರರಲ್ಲಿ ಎರಡು ಪಾಲುತವರದ ಉತ್ಪಾದನೆ ಮಾಡುತ್ತಿರುವ ದೇಶ ಯಾವುದು? - ಮಲೇಶಿಯಾ

235. ಒರಿಸ್ಸಾ ರಾಜ್ಯದ ತಲಚೇರ್‌ ಎಂಬ ಸ್ಥಳ ಯಾಕೆ ಪ್ರಸಿದ್ಧವಾಗಿದೆ? - ಶಾಖೋತ್ಪನ್ನ ವಿದ್ಯುದಾಗರ

236. ಕರ್ನಾಟಕದ ಪ್ರಪ್ರಥಮ ಭೂಗರ್ಭ ವಿದ್ಯುದಾಗರ ಯಾವುದು? - ವಾರಾಹಿ (ದಕ್ಷಿಣ ಕನ್ನಡ)

237. ವಿಶ್ವದಲ್ಲಿಯೇ ಅತ್ಯಂತ ಹಳೆಯದೆಂದು ಪತ್ತೆಯಾಗಿರುವ ನಗರ ಯಾವುದು? - ಡಮಾಸ್ಕಸ್

238. ಭಾರತದಲ್ಲಿ ಕೋಕೋವನ್ನು ಎಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ? - ಕೇರಳ

239. ಭಾರತದಲ್ಲಿ ಹೆಚ್ಚು ನೀರಾವರಿ ಪಡೆದಿರುವ ರಾಜ್ಯ ಯಾವುದು? - ಪಂಜಾಬ

240. ವಿಶ್ವದ ಯಾವ ನದಿ ಗರಿಷ್ಠ ಪ್ರಮಾಣದಲ್ಲಿ ನೀರನ್ನು ಸಮುದ್ರಕ್ಕೆ ಸಾಗಿಸುತ್ತದೆ? - ಅಮೆಜಾನ್

241. ಕೊಳವೆಬಾವಿ ನೀರಾವರಿ ಪದ್ಧತಿ ಪ್ರಧಾನವಾಗಿರುವ ಭಾರತೀಯ ರಾಜ್ಯ ಯಾವುದು? – ಉತ್ತರಪ್ರದೇಶ

242. ಸಾಂಬರ್ ಸರೋವರ ಯಾವ ರಾಜ್ಯದಲ್ಲಿದೆ? - ರಾಜಸ್ಥಾನ

243. ಭಾರತದಿಂದ ಕಬ್ಬಿಣವನ್ನು ಅತ್ಯಂತ ಹೆಚ್ಚಾಗಿ ಆಮದು ಮಾಡಿಕೊಳ್ಳುವ ದೇಶ ಯಾವುದು? – ಜಪಾನ

244.ಭಾರತದಲ್ಲಿ ಅತ್ಯಂತ ಹೆಚ್ಚು ಕಲ್ಲಿದ್ದಲು ದೊರೆಯುವ ಪ್ರದೇಶ ಯಾವುದು? - ರಾಣಿಗಂಜ (ಪ. ಬಂಗಾಳ)

245. ಬಾರ್ಬೆರಿಯನ್ ದೇಶಗಳೆಂದು ಯಾವ ದೇಶಗಳನ್ನು ಕರೆಯುತ್ತಾರೆ? - ಮೆರೊಕ್ಕೊ, ಅಲ್ಜೀರಿಯಾ, ಟ್ಯೂನೇಶಿಯಾ

246. ಅಟ್ಲಾಂಟಿಕ್ ಸಾಗರದ ಬಂದರ, ಡಾಕಾರ್ ಯಾವ ದೇಶಕ್ಕೆ ಸೇರಿರುತ್ತದೆ? - ಸೆನಗಾಲ್

247. ಸುಯೇಜ್ ಕಾಲುವೆಯ ದಕ್ಷಿಣದ ತುದಿಯಲ್ಲಿ ಸುಯೇಜ್ ಬಂದರಿದೆ. ಆದರೆ ಉತ್ತರದ ತುದಿಯಲ್ಲಿ ಇರುವ ಬಂದರು ಯಾವುದು ? - ಸೈಯದ್

248. ಫೀಜೀ ದೇಶದ ರಾಜಧಾನಿ ಯಾವುದು? - ಸುವಾ

249. ಜಗತ್ತಿನಲ್ಲಿ ಕೇವಲ ಭೂಸೇನೆಯನ್ನು ಮಾತ್ರ ಹೊಂದಿರುವ ಅತ್ಯಂತ ದೊಡ್ಡದೇಶ ಯಾವುದು? - ಮಂಗೋಲಿಯಾ

250. ಪೋಪಾ ಪರ್ವತವು ಯಾವ ದೇಶದಲ್ಲಿದೆ? - ಮಂಗೋಲಿಯಾ - ಬರ್ಮಾ