ಭಾರತ ಸಂವಿಧಾನ
1. ಯಾವ ಕಾಯ್ದೆಯು ಭಾರತದಲ್ಲಿ ಮೊದಲ ಬಾರಿಗೆ ಖಾತೆಗಳ ಪದ್ಧತಿಯನ್ನು ಜಾರಿಗೆ ಬಂದಿತು?
ಎ ) ರೆಗ್ಯುಲೇಟಿಂಗ್ ಕಾಯ್ದೆ - 1773
ಬಿ ) ಚಾರ್ಟರ್ ಕಾಯ್ದೆ - 1833
ಸಿ ) ಭಾರತೀಯ ಮಂಡಳಿಗಳ ಕಾಯ್ದೆ - 1861 ✓
ಡಿ ) ಭಾರತ ಸರ್ಕಾರ ಕಾಯ್ದೆ - 1935
2. ಯಾವ ಕಾಯ್ದೆಯು ಬಂಗಾಳದ ಗವರ್ನರ್ ನನ್ನು ಭಾರತದ ಗವರ್ನರ್ ಜನರಲ್ ಎಂದು ನಾಮಕರಣ ಮಾಡಿತು
ಎ ) ಚಾರ್ಟರ್ ಕಾಯ್ದೆ - 1833 ✓
ಬಿ ) ಭಾರತ ಸರ್ಕಾರ ಕಾಯ್ದೆ - 1858
ಸಿ ) ಚಾರ್ಟರ್ ಕಾಯ್ದೆ - 1813
ಡಿ ) ಪಿಟ್ಸ್ ಇಂಡಿಯಾ ಕಾಯ್ದೆ - 1784
3. ಪ್ರಾಂತ್ಯಗಳಲ್ಲಿ ದ್ವಿಸರ್ಕಾರ ವ್ಯವಸ್ಥೆ ಜಾರಿಗೆ ತಂದ ಕಾಯ್ದೆ
ಎ ) ಮಾಂಟೆಗೋ ಚೆಲ್ಸ್ಮ್ ಪೋರ್ಡ್ ಸುಧಾರಣೆಗಳು - 1919 ✓
ಬಿ ) ಭಾರತ ಸರ್ಕಾರ ಕಾಯ್ದೆ - 1935
ಸಿ ) ಮಾರ್ಲೇ - ಮಿಂಟೋ ಸುಧಾರಣೆಗಳು - 1909
ಡಿ ) ಯಾವುದೂ ಅಲ್ಲ
4. ಸಂವಿಧಾನ ರಚನಾ ಸಭೆಯ ಮೊದಲ ಸಭೆ ನಡೆದ ದಿನ
ಎ ) 26 ನವೆಂಬರ್ 1949
ಬಿ ) 15 ಆಗಸ್ಟ್ 1947
ಸಿ ) 6 ಆಗಸ್ಟ್ 1946
ಡಿ ) 9 ಡಿಸೆಂಬರ್ 1946 ✓
5. ಸಂವಿಧಾನ ಕರಡು ರಚನಾ ಸಭೆಯ ಅಧ್ಯಕ್ಷರು
ಎ ) ರಾಜೇಂದ್ರ ಪ್ರಸಾದ್
ಬಿ ) ಬಿ.ಆರ್ . ಅಂಬೇಡ್ಕರ್ ✓
ಸಿ ) ಸಚ್ಚಿದಾನಂದ ಸಿನ್ಹಾ
ಡಿ ) ಜವಹರಲಾಲ್ ನೆಹರು
6. ಭಾರತ ಸಂವಿಧಾನ ಅಂಗೀಕಾರಗೊಂಡ ದಿನ
ಎ ) 26 ಜನವರಿ 1950
ಬಿ ) 15 ಆಗಸ್ಟ್ 1947
ಸಿ ) 26 ನವೆಂಬರ್ 1949 ✓
ಡಿ ) ಯಾವುದೂ ಅಲ್ಲ
7. ತನ್ನದೇ ಆದ ಪ್ರತ್ಯೇಕ ಸಂವಿಧಾನ ಹೊಂದಿರುವ ಭಾರತದ ರಾಜ್ಯ
ಎ ) ಜಮ್ಮು ಕಾಶ್ಮೀರ ✓
ಬಿ ) ಗೋವಾ
ಸಿ ) ನಾಗಾಲ್ಯಾಂಡ್
ಡಿ ) ಅರುಣಾಚಲ ಪ್ರದೇಶ
8. ಸಂವಿಧಾನದ ಮೂಲಗಳಿಗೆ ಸಂಬಂಧಿಸಿದಂತೆ ಇವುಗಳಲ್ಲಿ ಯಾವುವು ಸರಿಯಲ್ಲ?
ಎ ) ಮೂಲಭೂತ ಹಕ್ಕುಗಳು - ಅಮೇರಿಕಾ ಸಂವಿಧಾನ
ಬಿ ) ರಾಜ್ಯನೀತಿ ನಿರ್ದೇಶಕ ತತ್ವಗಳು - ಐರಿಷ್ ಸಂವಿಧಾನ
ಸಿ ) ಉಳಿಕೆ ಅಧಿಕಾರಗಳನ್ನು ಕೇಂದ್ರಕ್ಕೆ ನೀಡುವುದು - ಕೆನಡಾ ಸಂವಿಧಾನ
ಡಿ ) ಮೂಲಭೂತ ಕರ್ತವ್ಯಗಳು - ಆಸ್ಟ್ರೇಲಿಯಾ ✓
9. ಸಂವಿಧಾನ ತಿದ್ದುಪಡಿ ವಿಧಾನವನ್ನು ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
ಎ ) ದಕ್ಷಿಣ ಆಫ್ರಿಕಾ ✓
ಬಿ ) ಜರ್ಮನಿ
ಸಿ ) ಅಮೇರಿಕಾ
ಡಿ ) ಯಾವುದೂ ಅಲ್ಲ
10. ಸಂವಿಧಾನ ರಚನಾ ಸಭೆಯ ಕಾನೂನು ಸಲಹೆಗಾರರು
ಎ ) ಕೆ.ಎಂ. ಮುನ್ನಿ
ಬಿ ) ಭೂಲಾಭಾಯಿ ದೇಸಾಯಿ
ಸಿ ) ಬಿ.ಎನ್ . ರಾವ್ ✓
ಡಿ ) ಅಸಫ್ ಅಲಿ
11. ಭಾರತದ ಸಂವಿಧಾನ ರಚಿಸಿದ ಸಂವಿಧಾನ ರಚನಾಸಭೆ ಅಸ್ತಿತ್ವಕ್ಕೆ ಬಂದ ವರ್ಷ
ಎ ) 1945
ಬಿ ) 1946 ✓
ಸಿ) 1947
ಡಿ ) 1949
12. ಇವುಗಳಲ್ಲಿ ಯಾವುದು ಸಂಸದೀಯ ಸರ್ಕಾರದ ಲಕ್ಷಣ
ಎ ) ಕಾರ್ಯಾಂಗವು ನ್ಯಾಯಾಂಗಕ್ಕೆ ಜವಾಬ್ದಾರಿಯಾಗುವುದು
ಬಿ ) ಕಾರ್ಯಾಂಗವು ಶಾಸಕಾಂಗಕ್ಕೆ ಜವಾಬ್ದಾರಿಯಾಗಿರುವುದು ✓
ಸಿ ) ನ್ಯಾಯಾಂಗವು ಶಾಸಕಾಂಗಕ್ಕೆ ಜವಾಬ್ದಾರಿಯಾಗಿರುವುದು
ಡಿ ) ಶಾಸಕಾಂಗವು ಕಾರ್ಯಾಂಗಕ್ಕೆ ಜವಾಬ್ದಾರಿಯಾಗಿರುವುದು
13. ಇವುಗಳಲ್ಲಿ ಯಾವುದನ್ನು ಜರ್ಮನಿಯ ವೀಮರ್ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
ಎ ) ಬಲಿಷ್ಠ ಕೇಂದ್ರವುಳ್ಳ ಒಕ್ಕೂಟ ರಾಜ್ಯ
ಬಿ ) ರಾಷ್ಟ್ರಪತಿಯ ಚುನಾವಣಾ ವಿಧಾನ
ಸಿ ) ತುರ್ತುಪರಿಸ್ಥಿತಿಗೆ ಸಂಬಧಿಸಿದ ಉಪಬಂಧಗಳು
ಡಿ ) ರಾಷ್ಟ್ರೀಯ ತುರ್ತುಪರಿಸ್ಥಿತಿ ಜಾರಿಯಲ್ಲಿದ್ದಾಗ ಮೂಲಭೂತ ಹಕ್ಕುಗಳ ಅಮಾನತು ✓
14. ಕಾನೂನಿನ ಅಧಿಪತ್ಯ, ಸಂಸದೀಯ ಸರ್ಕಾರ ಮತ್ತು ಕಾನೂನು ರಚನೆ ವಿಧಾನ ಇವುಗಳನ್ನು ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
ಎ ) ಅಮೆರಿಕಾ ಸಂವಿಧಾನ
ಬಿ ) ಬ್ರಿಟೀಷ್ ಸಂವಿಧಾನ ✓
ಸಿ ) ಕೆನಡಾ ಸಂವಿಧಾನ
ಡಿ ) ರಷ್ಯಾ ಸಂವಿಧಾನ
15. ಭಾರತದ ಪೌರತ್ವ ಪಡೆಯಲು ಅಗತ್ಯವಾದ ನಿಬಂಧನೆಗಳನ್ನು ಮಾಡುವ ಅಧಿಕಾರ ಹೊಂದಿರುವುದು
ಎ ) ಸಂಸತ್ತು ✓
ಬಿ ) ರಾಷ್ಟ್ರಪತಿ
ಸಿ ) ರಾಜ್ಯ ಶಾಸಕಾಂಗಗಳು
ಡಿ ) ಪ್ರಧಾನಮಂತ್ರಿ
16. ಸಂವಿಧಾನ ರಚನಾಸಭೆಯು ರಚನೆಯಾದದ್ದು ಯಾವ ಯೋಜನೆಯ ಶಿಫಾರಸ್ಸಿನ ಮೇರೆಗೆ
ಎ ) ಕ್ರಿಪ್ಟ್ ಯೋಜನೆ
ಬಿ ) ಕ್ಯಾಬಿನೆಟ್ ಮಿಷನ್ ಯೋಜನೆ ✓
ಸಿ ) ರಾಜಾಜಿ ಯೋಜನೆ
ಡಿ ) ಮೌಂಟ್ ಬ್ಯಾಟನ್ ಯೋಜನೆ
17. ಸಂವಿಧಾನ ರಚನಾ ಸಭೆಯಲ್ಲಿ ಯಾವ ಪಕ್ಷದ ಪ್ರತಿನಿಧಿಗಳಿರಲಿಲ್ಲ?
ಎ ) ಕಾಂಗ್ರೆಸ್
ಬಿ ) ಹಿಂದೂ ಮಹಾಸಭಾ
ಸಿ ) ಕಮ್ಯುನಿಸ್ಟ್ ಪಕ್ಷ ✓
ಡಿ ) ಸೋಷಿಯಲಿಸ್ಟ್ ಪಕ್ಷ
18. ಸಂವಿಧಾನದ ವಿವಿಧ ಅಂಶಗಳನ್ನು ಪರಿಶೀಲಿಸಲು ಸಂವಿಧಾನ ರಚನಾ ಸಭೆಯು ನೇಮಿಸಿದ ಸಮಿತಿಗಳ ಸಂಖ್ಯೆ
ಎ ) 7
ಬಿ ) 8
ಸಿ ) 10
ಡಿ) 13 ✓
19. ಸಂವಿಧಾನದ ಪ್ರಸ್ತಾವನೆಯಲ್ಲಿ ಜಾತ್ಯಾತೀತ ಮತ್ತು ಸಮಾಜವಾದಿ ಪದಗಳನ್ನು ಯಾವ ತಿದ್ದುಪಡಿ ಮೂಲಕ ಸೇರಿಸಲಾಯಿತು?
ಎ ) 42 ನೇ ತಿದ್ದುಪಡಿ ✓
ಬಿ ) 49 ನೇ ತಿದ್ದುಪಡಿ
ಸಿ ) 52 ನೇ ತಿದ್ದು ಪಡಿ
ಡಿ ) 65 ನೇ ತಿದ್ದು ಪಡಿ
20. ಸಂವಿಧಾನ ರಚನಾ ಸಭೆಯು ಮೂಲಭೂತ ಹಕ್ಕು ಮತ್ತು ಅಲ್ಪಸಂಖ್ಯಾತರ ಕುರಿತು ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರು
ಎ ) ಅಂಬೇಡ್ಕರ್
ಬಿ ) ಸರ್ದಾರ್ ಪಟೇಲ್ ✓
ಸಿ ) ಕೃಪಲಾನಿ
ಡಿ ) ನೆಹರೂ
21. ಸಂವಿಧಾನದಲ್ಲಿನ ಒಟ್ಟು ಮೂಲಭೂತ ಹಕ್ಕುಗಳ ಸಂಖ್ಯೆ
ಎ ) 6 ✓
ಬಿ ) 7
ಸಿ ) 8
ಡಿ ) 5
22. ಮೂಲಭೂತ ಹಕ್ಕುಗಳಿಗೆ
ಎ ) ಸಾರ್ವಜನಿಕ ಇಚ್ಛೆಯ ರಕ್ಷೆ ಇದೆ
ಬಿ ) ಕಾನೂನಿನ ಬೆಂಬಲವಿಲ್ಲ
ಸಿ ) ಕಾನೂನಿನ ಬೆಂಬಲವಿದೆ ✓
ಡಿ ) ನೈತಿಕ ಬೆಂಬಲವಿದೆ
23. ಮೂಲಭೂತ ಹಕ್ಕುಗಳನ್ನು ತಿದ್ದುಪಡಿ ಮಾಡುವ ಅಧಿಕಾರವನ್ನು ಸಂಸತ್ತಿಗೆ ನೀಡಿದ ಸಂವಿಧಾನ ತಿದ್ದುಪಡಿ ಕಾಯ್ದೆ
ಎ ) 40 ನೇ ತಿದ್ದುಪಡಿ ಕಾಯ್ದೆ
ಬಿ ) 24 ನೇ ತಿದ್ದುಪಡಿ ಕಾಯ್ದೆ ✓
ಸಿ ) 23 ನೇ ತಿದ್ದುಪಡಿ ಕಾಯ್ದೆ
ಡಿ ) 22 ನೇ ತಿದ್ದುಪಡಿ ಕಾಯ್ದೆ
24, ಅಧೀನ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರದಂತೆ ತಡೆಯಲು ಹೈಕೋರ್ಟು ಅಥವಾ ಸುಪ್ರೀಂಕೋರ್ಟು ಹೊರಡಿಸುವ ರಿಟ್
ಎ ) ಕೋ ವಾರಂಟೋ
ಬಿ ) ಸರ್ಶಿಯೋರಾರಿ
ಸಿ ) ಮ್ಯಾಂಡಮಸ್
ಡಿ ) ಪ್ರೊಹಿಬಿಷನ್ ✓
25. ಮೂಲಭೂತ ಕರ್ತವ್ಯಗಳನ್ನೊಳಗೊಂಡಿರುವ ಸಂವಿಧಾನದ ಭಾಗ
ಎ ) ಭಾಗ III
ಬಿ ) ಭಾಗ IVA ✓
ಸಿ ) ಭಾಗ IV
ಡಿ ) ಭಾಗ IIIA
26. ಯಾವ ಸಂವಿಧಾನ ತಿದ್ದುಪಡಿ ಕಾಯ್ದೆಯ ಮೂಲಕ ಕೆಲವು ಸಂದರ್ಭಗಳಲ್ಲಿ ರಾಜ್ಯನೀತಿ ನಿರ್ದೇಶಕ ತತ್ವಗಳು ಮೂಲಭೂತ ಹಕ್ಕುಗಳ ಮೇಲೆ ಮೇಲುಗೈ ಸಾಧಿಸಲು ಅವಕಾಶ ಮಾಡಿಕೊಡಲಾಯಿತು?
ಎ ) 42 ನೇ ತಿದ್ದುಪಡಿ ✓
ಬಿ ) 24 ನೇ ತಿದ್ದುಪಡಿ
ಸಿ ) 44 ನೇ ತಿದ್ದುಪಡಿ
ಡಿ ) 25 ನೇ ತಿದ್ದುಪಡಿ
27. ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ನ್ನು ಯಾವ ವಿಧಿ ಕಾರ್ಯರೂಪಕ್ಕೆ ತರಲು ಜಾರಿಗೊಳಿಸಲಾಯಿತು
ಎ ) ವಿಧಿ 23
ಬಿ ) ವಿಧಿ 24 ✓
ಸಿ ) ವಿಧಿ 21
ಡಿ ) ಮೇಲಿನ ಎಲ್ಲವೂ
28. ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಸ್ಥಾಪನೆಯಾದ ವರ್ಷ
ಎ ) 1991
ಬಿ ) 1992
ಸಿ ) 1993 ✓
ಡಿ ) 1990
29. ಸಮಾನತೆಯ ಹಕ್ಕನ್ನು ನೀಡುವ ಸಂವಿಧಾನ ವಿಧಿಗಳು
ಎ ) ವಿಧಿ 16 ರಿಂದ 20
ಬಿ ) ವಿಧಿ 15 ರಿಂದ 19
ಸಿ ) ವಿಧಿ 13 ರಿಂದ 17
ಡಿ ) ವಿಧಿ 14 ರಿಂದ 18✓
30. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಸರ್ಕಾರವು ಅಗತ್ಯಕ್ರಮ ತೆಗೆದುಕೊಳ್ಳಬೇಕೆಂದು ನಿರ್ಬಂಧಿಸುವ ವಿಧಿ
ಎ ) ವಿಧಿ 341
ಬಿ ) ವಿಧಿ 350
ಸಿ ) ಎಫಿ 350A ✓
ಡಿ ) ವಿಧಿ 351
31. ಧರ್ಮ, ಜಾತಿ, ಲಿಂಗ ಇತ್ಯಾದಿಗಳ ಆಧಾರದಲ್ಲಿ ತಾರತಮ್ಯ ನಿಷೇಧಿಸುವುದು ಯಾವ ಮೂಲಭೂತ ಹಕ್ಕಿನಡಿಯಲ್ಲಿ ಬರುತ್ತದೆ?
ಎ ) ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
ಬಿ ) ಶೋಷಣೆ ವಿರುದ್ಧದ ಹಕ್ಕು
ಸಿ ) ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳು
ಡಿ ) ಸಮಾನತೆಯ ಹಕ್ಕು ✓
32. ಪ್ರತಿಬಂಧಕ ಸ್ಥಾನಬದ್ಧತೆ ಕಾಯ್ದೆಯು ಯಾವ ಮೂಲಭೂತ ಹಕ್ಕನ್ನು ಮೊಟಕುಗೊಳಿಸುತ್ತದೆ?
ಎ ) ಸಮಾನತೆಯ ಹಕ್ಕು
ಬಿ ) ಸ್ವಾತಂತ್ರ್ಯದ ಹಕ್ಕು ✓
ಸಿ ) ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
ಡಿ ) ಶೋಷಣೆ ವಿರುದ್ಧದ ಹಕ್ಕು
33. ಮೂಲಭೂತ ಹಕ್ಕುಗಳನ್ನು ಯಾವ ರೀತಿಯಲ್ಲಿ ಅಮಾನತುಗೊಳಿಸಬಹುದು?
ಎ ) ಸಂಸತ್ತಿನ ಕಾಯ್ದೆಯ ಮೂಲಕ
ಬಿ ) ಸುಪ್ರೀಂಕೋರ್ಟಿನ ಆದೇಶದ ಮೂಲಕ
ಸಿ ) ರಾಷ್ಟ್ರೀಯ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ರಾಷ್ಟ್ರಪತಿಯ ಆದೇಶದ ಮೂಲಕ ✓
ಡಿ ) ಯಾವ ರೀತಿಯಲ್ಲಿಯೂ ಅಮಾನತುಗೊಳಿಸಲು ಸಾಧ್ಯವಿಲ್ಲ
34. ಸಂವಿಧಾನದ ಯಾವ ವಿಧಿಯಡಿಯಲ್ಲಿ ಸರ್ಕಾರವು ಭಾರತರತ್ನ ಮತ್ತು ಪದ್ಮ ಪ್ರಶಸ್ತಿಗಳನ್ನು ನೀಡುತ್ತದೆ
ಎ ) ವಿಧಿ 14
ಬಿ ) ವಿಧಿ 18 ✓
ಸಿ ) ವಿಧಿ 25
ಡಿ ) ಯಾವುದೂ ಅಲ್ಲ
35. ಉಪರಾಷ್ಟ್ರಪತಿಯನ್ನು ಪದಚ್ಯುತಗೊಳಿಸುವ ಸೂಚನೆಯನ್ನು ಯಾವ ಸದನದಲ್ಲಿ ಆರಂಭಿಸಬಹುದು?
ಎ ) ಲೋಕಸಭೆಯಲ್ಲಿ ಮಾತ್ರ
ಬಿ ) ಸಂಸತ್ತಿನ ಯಾವುದೇ ಸದನದಲ್ಲಿ
ಸಿ ) ಸಂಸತ್ತಿನ ಜಂಟಿ ಅಧಿವೇಶನದಲ್ಲಿ
ಡಿ ) ರಾಜ್ಯಸಭೆಯಲ್ಲಿ ಮಾತ್ರ ✓
36. ರಾಷ್ಟ್ರಪತಿಯು ಯಾವ ವಿಧಿಯಡಿಯಲ್ಲಿ ಸುಗ್ರೀವಾಜ್ಞೆಗಳನ್ನು ಹೊರಡಿಸುತ್ತಾರೆ?
ಎ ) ವಿಧಿ 72
ಬಿ ) ವಿಧಿ 123 ✓
ಸಿ ) ವಿಧಿ 356
ಡಿ ) ವಿಧಿ 78
37. ಇವುಗಳಲ್ಲಿ ಯಾವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ರಾಷ್ಟ್ರಪತಿಯ ಪೂರ್ವಾನುಮತಿ ಅಗತ್ಯವಿಲ್ಲ?
ಎ ) ರಾಜ್ಯಗಳ ಪುನರ್ವಿಂಗಡಣಾ ಮಸೂದೆ
ಬಿ ) ಸಂವಿಧಾನ ತಿದ್ದುಪಡಿ ಮಸೂದೆ ✓
ಸಿ ) ವಿತ್ತ ಮಸೂದೆ
ಡಿ ) ವಿಧಿ 31A ಗೆ ಸಂಬಂಧಿಸಿದ ಮಸೂದೆ
38, ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆಗೆ ಇವುಗಳಲ್ಲಿ ಯಾವ ಕಾರಣವನ್ನು ಸಂವಿಧಾನದಲ್ಲಿ ನಮೂದಿಸಿಲ್ಲ
ಎ ) ಅಂತರಿಕ ದಂಗೆ ✓
ಬಿ ) ಸಶಸ್ತ್ರ ದಂಗೆ
ಸಿ ) ಯುದ್ಧ
ಡಿ ) ಪರಕೀಯ ಆಕ್ರಮಣ
39, ಇವುಗಳಲ್ಲಿ ಯಾವ ಹೇಳಿಕೆ ಸರಿಯಲ್ಲ?
ಎ ) ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆಗೆ ಕ್ಯಾಬಿನೆಟ್ನ ಲಿಖಿತ ಶಿಫಾರಸು ಅಗತ್ಯ
ಬಿ ) ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆಯನ್ನು ಸಂಸತ್ತು ಒಂದು ತಿಂಗಳಿನೊಳಗೆ ಅಂಗೀಕರಿಸಬೇಕು
ಸಿ ) ಯುದ್ಧ ಕಾರಣದಿಂದ ತುರ್ತು ಪರಿಸ್ಥಿತಿ ಘೋಷಿಸಿದ ಸಂದರ್ಭದಲ್ಲಿ ಮಾತ್ರ ಕಲಂ 19 ನ್ನು ಅಮಾನತ್ತಿನಲ್ಲಿಡಬಹುದು
ಡಿ ) ರಾಷ್ಟ್ರೀಯ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ರಾಜ್ಯ ಪಟ್ಟಿಯಲ್ಲಿನ ವಿಷಯಗಳ ಮೇಲೆ ಶಾಸನ ಮಾಡಲು ಸಂಸತ್ತಿಗೆ ಅಧಿಕಾರವಿಲ್ಲ ✓
40. ಭಾರತದ ನಿಯಂತ್ರಕ ಮತ್ತು ಮಹಾಲೇಖಪಾಲರನ್ನು (CAG) ಯಾವ ಸಮಿತಿಯ ಸ್ನೇಹಿತ, ತತ್ವಜ್ಞಾನಿ ಮತ್ತು ಮಾರ್ಗದರ್ಶಕ ಎಂದು ಬಣ್ಣಿಸಲಾಗಿದೆ
ಎ ) ಅಂದಾಜು ಸಮಿತಿ
ಬಿ ) ಸಾರ್ವಜನಿಕ ಉದ್ಯಮಗಳ ಸಮಿತಿ
ಸಿ ) ಸಾರ್ವಜನಿಕ ಲೆಕ್ಕಪತ್ರ ಸಮಿತಿ ✓
ಡಿ ) ಯಾವುದೂ ಅಲ್ಲ
41. ಸಂವಿಧಾನದ ಪ್ರಕಾರ ಕೇಂದ್ರದ ಕಾರ್ಯಾಂಗಾಧಿಕಾರವು ಯಾರಲ್ಲಿ ನಿಹಿತವಾಗಿದೆ?
ಎ ) ಪ್ರಧಾನಮಂತ್ರಿ
ಬಿ ) ರಾಷ್ಟ್ರಪತಿ ✓
ಸಿ ) ಕ್ಯಾಬಿನೆಟ್
ಡಿ ) ಸಂಸತ್ತು
42. ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ಚುನಾವಣೆಗಳಿಗೆ ಸಂಬಂಧಿಸಿದ ವಿವಾದಗಳನ್ನು ತೀರ್ಮಾನಿಸುವ ಅಧಿಕಾರವಿರುವುದು
ಎ ) ಸುಪ್ರೀಂಕೋರ್ಟು ✓
ಬಿ ) ಚುನಾವಣಾ ಆಯೋಗ
ಸಿ ) ಸಂಸದೀಯ ಸಮಿತಿ
ಡಿ ) ಸಂಸತ್ತು
43. ಉಪರಾಷ್ಟ್ರಪತಿಯನ್ನು ಆಯ್ಕೆ ಮಾಡುವವರು
ಎ ) ರಾಷ್ಟ್ರಪತಿಯನ್ನು ಚುನಾಯಿಸುವ ಚುನಾಯಿಕ ಸಮುದಾಯ
ಬಿ ) ಸಂಸತ್ತಿನ ಎರಡೂ ಸದನಗಳ ಚುನಾಯಿತ ಸದಸ್ಯರು
ಸಿ ) ಸಂಸತ್ತಿನ ಎರಡೂ ಸದನಗಳ ಸದಸ್ಯರು ✓
ಡಿ ) ರಾಜ್ಯಸಭೆಯ ಸದಸ್ಯರು
44. ಕೇಂದ್ರ ಮಂತ್ರಿಗಳಿಗೆ ಖಾತೆಗಳನ್ನು ಹಂಚಿಕೆ ಮಾಡುವವರು
ಎ ) ರಾಷ್ಟ್ರಪತಿ
ಬಿ ) ಮಂತ್ರಿಗಳ ಆಯ್ಕೆಗೆ ಬಿಡಲಾಗುತ್ತದೆ
ಸಿ ) ಕ್ಯಾಬಿನೆಟ್
ಡಿ ) ಪ್ರಧಾನಮಂತ್ರಿ ✓
45, ಮಂತ್ರಿ ಮಂಡಲವು ಲೋಕಸಭೆಗೆ ಸಾಮೂಹಿಕವಾಗಿ ಜವಾಬ್ದಾರಿಯಾಗಿರುವುದು ಯಾವ ಮಾದರಿ ಸರ್ಕಾರದ ಲಕ್ಷಣ?
ಎ ) ಸಂಸದೀಯ ಸರ್ಕಾರ ✓
ಬಿ ) ಸಂಯುಕ್ತ ಮಾದರಿ ಸರ್ಕಾರ
ಸಿ ) ಏಕಾತ್ಮಕ ಸರ್ಕಾರ
ಡಿ ) ಯಾವುದೂ ಅಲ್ಲ
46. ಸಂವಿಧಾನದ ಪ್ರಕಾರ ಸಂಸತ್ತು ಇವುಗಳಲ್ಲಿ ಯಾವುದನ್ನು ಒಳಗೊಂಡಿದೆ
ಎ ) ಲೋಕಸಭೆ ಮತ್ತು ರಾಜ್ಯಸಭೆ
ಬಿ ) ಲೋಕಸಭೆ ಮತ್ತು ಮಂತ್ರಿಮಂಡಲ
ಸಿ ) ರಾಷ್ಟ್ರಪತಿ , ಲೋಕಸಭೆ , ರಾಜ್ಯಸಭೆ ✓
ಡಿ ) ಪ್ರಧಾನಮಂತ್ರಿ ಮತ್ತು ಲೋಕಸಭೆ
47. ಭಾರತದ ರಕ್ಷಣಾ ಪಡೆಯ ಮಹಾದಂಡನಾಯಕರು
ಎ ) ಪ್ರಧಾನಮಂತ್ರಿ
ಬಿ ) ರಾಷ್ಟ್ರಪತಿ ✓
ಸಿ ) ಗೃಹಸಚಿವರು
ಡಿ ) ರಕ್ಷಣಾಸಚಿವರು
48. ಉಪರಾಷ್ಟ್ರಪತಿಗೆ ಪ್ರಮಾಣವಚನ ಬೋಧಿಸುವವರು
ಎ ) ಲೋಕಸಭಾಧ್ಯಕ್ಷ
ಬಿ ) ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಾಧೀಶರು
ಸಿ ) ಪ್ರಧಾನಮಂತ್ರಿ
ಡಿ ) ರಾಷ್ಟ್ರಪತಿ✓
49. ಪ್ರಧಾನಮಂತ್ರಿ ಹುದ್ದೆಗೆ ಅವಕಾಶ ಮಾಡಿಕೊಡುವ ಸಂವಿಧಾನ ವಿಧಿ
ಎ ) ವಿಧಿ 75
ಬಿ ) ವಿಧಿ 74 ✓
ಸಿ ) ವಿಧಿ 78
ಡಿ ) ವಿಧಿ 72
50. ಸಂಸತ್ ಸದಸ್ಯರ ಅನರ್ಹತೆಗೆ ಸಂಬಂಧಿಸಿದಂತೆ ರಾಷ್ಟ್ರಪತಿಗೆ ಸಲಹೆ ನೀಡುವವರು
ಎ ) ಪ್ರಧಾನಮಂತ್ರಿ
ಬಿ ) ಕ್ಯಾಬಿನೆಟ್
ಸಿ ) ಚುನಾವಣಾ ಆಯೋಗ ✓
ಡಿ ) ಲೋಕಸಭಾಧ್ಯಕ್ಷ
51. ಭಾರತ ಯೋಜನಾ ಆಯೋಗದ ಅಧ್ಯಕ್ಷರು
ಎ ) ರಾಷ್ಟ್ರಪತಿ
ಬಿ ) ಪ್ರಧಾನಮಂತ್ರಿ ✓
ಸಿ ) ಉಪರಾಷ್ಟ್ರಪತಿ
ಡಿ ) ವಿತ್ತಸಚಿವ
52. ಪ್ರಧಾನಮಂತ್ರಿಯು ಇವುಗಳಲ್ಲಿ ಯಾವುದರ ಅಧ್ಯಕ್ಷರು?
ಎ ) ಯೋಜನಾ ಆಯೋಗ
ಬಿ ) ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
ಸಿ ) ಅಂತಾರಾಜ್ಯ ಮಂಡಳಿ
ಡಿ ) ವಲಯ ಮಂಡಳಿ ✓
53. ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಲು ಕನಿಷ್ಠ ವಯೋಮಿತಿ
ಎ ) 30 ✓
ಬಿ ) 35
ಸಿ ) 25
ಡಿ ) 21
54. ರಾಜ್ಯಸಭೆಯ ಸದಸ್ಯರನ್ನು ಚುನಾಯಿಸುವವರು
ಎ ) ಸಂಸತ್ ಸದಸ್ಯರು
ಬಿ ) ರಾಜ್ಯ ವಿಧಾನಸಭೆಯ ಸದಸ್ಯರು ✓
ಸಿ ) ಸಾರ್ವತ್ರಿಕ ವಯಸ್ಕಮತದಾನ
ಡಿ ) ಸ್ಥಳೀಯ ಸಂಸ್ಥೆಗಳ ಸದಸ್ಯರು
55. ರಾಜ್ಯಸಭೆ ಸದಸ್ಯರ ಅಧಿಕಾರವಧಿ
ಎ ) 6 ವರ್ಷ ✓
ಬಿ ) 5 ವರ್ಷ
ಸಿ ) 3 ವರ್ಷ
ಡಿ ) 7 ವರ್ಷ
56. ರಾಜ್ಯಸಭೆಯಲ್ಲಿ ಅತಿ ಹೆಚ್ಚಿನ ಪ್ರಾತಿನಿಧ್ಯ ಪಡೆದ ರಾಜ್ಯ
ಎ ) ಜಮ್ಮುಕಾಶ್ಮೀರ
ಬಿ ) ಬಿಹಾರ
ಸಿ ) ಪ.ಬಂಗಾಲ
ಡಿ ) ಉತ್ತರ ಪ್ರದೇಶ ✓
57. ಹಣಕಾಸಿನ ಮಸೂದೆಯನ್ನು ರಾಜ್ಯಸಭೆ ಎಷ್ಟು ದಿನಗಳ ಕಾಲ ತಡೆಹಿಡಿಯಬಲ್ಲುದು?
ಎ ) 15 ದಿನಗಳು
ಬಿ ) 14 ದಿನಗಳು✓
ಸಿ ) 21 ದಿನಗಳು
ಡಿ ) 27 ದಿನಗಳು
58. ಸಂವಿಧಾನದ ತಿದ್ದುಪಡಿಗೆ ಸಂಬಂಧಿಸಿದಂತೆ ರಾಜ್ಯಸಭೆಗೆ
ಎ ) ಲೋಕಸಭೆಯೊಂದಿಗೆ ಸಮಾನ ಅಧಿಕಾರವಿದೆ ✓
ಬಿ ) ಯಾವುದೇ ಅಧಿಕಾರವಿಲ್ಲ
ಸಿ ) ಕೆಲವು ತಿದ್ದುಪಡಿಗೆ ಸಂಬಂಧಿಸಿದಂತೆ ಲೋಕಸಭೆಯೊಂದಿಗೆ ಸಮಾನ ಅಧಿಕಾರ
ಡಿ ) ಯಾವ ಅಧಿಕಾರವೂ ಇಲ್ಲ
59. ಕೇಂದ್ರಾಡಳಿತ ಪ್ರದೇಶಗಳಿಗಾಗಿ ಲೋಕಸಭೆಯಲ್ಲಿ ಮೀಸಲಾದ ಸ್ಥಾನಗಳೆಷ್ಟು?
ಎ ) 20 ✓
ಬಿ) 25
ಸಿ) 30
ಡಿ) 35
60, ಮಸೂದೆ ಹಣಕಾಸಿನ ಮಸೂದೆಯೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸುವವರು
ಎ ) ಪ್ರಧಾನಮಂತ್ರಿ
ಬಿ ) ರಾಷ್ಟ್ರಪತಿ
ಸಿ ) ಲೋಕಸಭೆ ಸಭಾಪತಿ ✓
ಡಿ ) ಹಣಕಾಸಿನ ಸಚಿವರು
61. ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸದಸ್ಯರ ಸಂಖ್ಯೆ
ಎ ) 26
ಬಿ ) 22
ಸಿ ) 28 ✓
ಡಿ ) 21
62. ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸದಸ್ಯರ ಸಂಖ್ಯೆ
ಎ ) 12 ✓
ಬಿ) 15
ಸಿ ) 14
ಡಿ ) 11
63. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಸದಸ್ಯರ ಸಂಖ್ಯೆ
ಎ ) 22 ✓
ಬಿ ) 25
ಸಿ) 24
ಡಿ) 26
64. ಸಾಮಾನ್ಯ ಮಸೂದೆ ವಿಷಯದಲ್ಲಿ
ಎ ) ಸಂಸತ್ತಿನ ಎರಡು ಸದನಗಳಿಗೆ ಸಮಾನ ಅಧಿಕಾರಗಳಿವೆ✓
ಬಿ ) ಲೋಕಸಭೆಗೆ ಹೆಚ್ಚಿನ ಅಧಿಕಾರಗಳಿವೆ
ಸಿ ) ರಾಜ್ಯಸಭೆಗೆ ಹೆಚ್ಚಿನ ಅಧಿಕಾರಗಳಿವೆ
ಡಿ ) ಯಾವ ಅಧಿಕಾರವೂ ಇಲ್ಲ
65. ಸಂಸತ್ತಿನ ಎರಡು ಅಧಿವೇಶನಗಳ ನಡುವಿನ ಅಂತರ ಈ ಅವಧಿಯನ್ನು ಮೀರಬಾರದು
ಎ ) 3 ತಿಂಗಳು
ಬಿ ) 6 ತಿಂಗಳು ✓
ಸಿ ) 1 ವರ್ಷ
ಡಿ ) 2 ವರ್ಷ
66. ಭಾರತದ ಸಂಸತ್ತಿನಲ್ಲಿ ಅತಿ ದೊಡ್ಡ ಸಮಿತಿ
ಎ ) ಸಾರ್ವಜನಿಕ ಲೆಕ್ಕಪತ್ರ ಸಮಿತಿ
ಬಿ ) ಅಂದಾಜು ಸಮಿತಿ ✓
ಸಿ ) ಮನವಿ ಸಮಿತಿ
ಡಿ ) ಯಾವ ಸಮಿತಿಯ ಇಲ್ಲ
67. ವಿಧಾನಸಭೆಯ ಸದಸ್ಯರ ಸಂಖ್ಯೆಯ ಗರಿಷ್ಠ ಹಾಗೂ ಕನಿಷ್ಠ ಮಿತಿ
ಎ ) 50 ರಿಂದ 250
ಬಿ ) 60 ರಿಂದ 500 ✓
ಸಿ ) 100 ರಿಂದ 300
ಡಿ ) 250 ರಿಂದ 600
68. ವಿಧಾನ ಪರಿಷತ್ತಿನ ಸದಸ್ಯನಾಗಲು ವಯೋಮಿತಿ
ಎ ) 30
ಬಿ ) 25 ✓
ಸಿ ) 21
ಡಿ ) 22
69. ಯಾವ ಆಧಾರದ ಮೇಲೆ ರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸಲಾಗುವುದು?
ಎ ) ಸಂವಿಧಾನ ಉಲ್ಲಂಘನೆ ✓
ಬಿ ) ದುರ್ನಡತೆ ಮತ್ತು ಅಸಾಮರ್ಥ್ಯ
ಸಿ ) ಸಂಸತ್ತಿಗೆ ಅವಿಧೇಯರಾದರೆ
ಡಿ ) ಮೇಲಿನ ಎಲ್ಲಾ ಕಾರಣಗಳಿಗಾಗಿ
70. ಸಂಸತ್ತಿನ ಒಪ್ಪಿಗೆಯೊಂದಿಗೆ ರಾಷ್ಟ್ರೀಯ ತುರ್ತುಪರಿಸ್ಥಿತಿಯನ್ನು ಎಷ್ಟು ಅವಧಿಗೆ ವಿಸ್ತರಿ ಹುದು?
ಎ ) ಮೂರು ವರ್ಷದವರೆಗೆ
ಬಿ ) ಒಂದು ವರ್ಷದವರೆಗೆ
ಸಿ ) ಅನಿರ್ದಿಷ್ಟ ಅವಧಿಗೆ ✓
ಡಿ ) ಆರು ತಿಂಗಳವರೆಗೆ
71. 1956 ರ ರಾಜ್ಯಗಳ ಪುನರ್ರಚನೆ ಕಾಯಿದೆ ಪ್ರಕಾರ ಎಷ್ಟು ವಲಯ ಮಂಡಳಿಗಳನ್ನು ರಚಿಸಲಾಯಿತು?
ಎ ) 4 ವಲಯ ಮಂಡಳಿಗಳು
ಬಿ ) 5 ವಲಯ ಮಂಡಳಿಗಳು✓
ಸಿ ) 3 ವಲಯ ಮಂಡಳಿಗಳು
ಡಿ ) 6 ವಲಯ ಮಂಡಳಿಗಳು
72. ಸಂವಿಧಾನದ ಎಂಟನೆಯ ಅನುಸೂಚಿಯಲ್ಲಿ ಎಷ್ಟು ಭಾಷೆಗಳಿವೆ?
ಎ ) 17
ಬಿ) 20
ಸಿ ) 18
ಡಿ) 22✓
73. ರಾಜ್ಯಗಳ ಪುನರ್ ವಿಂಗಡಣಾ ಆಯೋಗದ ಅಧ್ಯಕ್ಷರಾಗಿದ್ದವರು
ಎ ) ಸರ್ದಾರ್ ಪಟೇಲ
ಬಿ ) ಎಸ್ . ನಿಜಲಿಂಗಪ್ಪ
ಸಿ ) ಫಜಲ್ ಅಲಿ ✓
ಡಿ ) ರಾಜಾಜಿ
74, ಆಂಧ್ರಪ್ರದೇಶ ಪ್ರತ್ಯೇಕ ರಾಜ್ಯದ ರಚನೆಗೆ ಹೋರಾಡಿದ ನಾಯಕ
ಎ ) ಎನ್.ಟಿ. ರಾಮರಾವ್
ಬಿ ) ಪೊಟ್ಟಿ ಶ್ರೀರಾಮುಲು ✓
ಸಿ ) ವಿಜಯಭಾಸ್ಕರರೆಡ್ಡಿ
ಡಿ ) ನೀಲಂ ಸಂಜೀವರೆಡ್ಡಿ
75. ಯಾವ ಕಲಂ ಹೊಸ ರಾಜ್ಯಗಳ ಸೃಷ್ಟಿ, ಗಡಿಗಳ ಬದಲಾವಣೆಗೆ ಸಂಸತ್ತಿಗೆ ಅಧಿಕಾರ ನೀಡುವುದು?
ಎ ) ಕಲಂ 17
ಬಿ ) ಕಲಂ 3 ✓
ಸಿ ) ಕಲಂ 8
ಡಿ ) ಕಲಂ 7
76. ದೆಹಲಿಗೆ ವಿಧಾನಸಭೆ ಹಾಗೂ ಸಚಿವ ಸಂಪುಟ ದೊರಕಿದ್ದು
ಎ ) 68 ನೇ ತಿದ್ದುಪಡಿ ಪ್ರಕಾರ
ಬಿ ) 69 ನೇ ತಿದ್ದುಪಡಿ ಪ್ರಕಾರ ✓
ಸಿ ) 70 ನೇ ತಿದ್ದುಪಡಿ ಪ್ರಕಾರ
ಡಿ ) 75 ನೇ ತಿದ್ದುಪಡಿ ಪ್ರಕಾರ
77. ಸಂವಿಧಾನವು ಮೊದಲು ತಿದ್ದುಪಡಿಯಾದ
ಎ ) 1947
ಬಿ ) 1950
ಸಿ ) 1951✓
ಡಿ ) 1952
78. ಎಷ್ಟನೇ ತಿದ್ದುಪಡಿಯನ್ವಯ ಸಂವಿಧಾನದಲ್ಲಿ ಒಂಭತ್ತನೆಯ ಅನುಸೂಚಿಯನ್ನು ಸೇರಿಸಲಾಯಿತು?
ಎ ) ಮೊದಲನೆಯ ತಿದ್ದುಪಡಿ ✓
ಬಿ ) ಹತ್ತನೆಯ ತಿದ್ದುಪಡಿ
ಸಿ ) ಹನ್ನೊಂದನೆಯ ತಿದ್ದುಪಡಿ
ಡಿ ) ಎಂಟನೆಯ ತಿದ್ದುಪಡಿ
79. ಸಂವಿಧಾನದ 74 ನೇಯ ತಿದ್ದುಪಡಿಯು ಇದಕ್ಕೆ ಸಂಬಂಧಿಸಿದೆ
ಎ ) ಪಂಚಾಯತ್ ರಾಜ್ ರಚನೆ
ಬಿ ) ಪೌರಸಂಸ್ಥೆಗಳು ✓
ಸಿ ) ಮತದಾನದ ವಯಸ್ಸಿನಲ್ಲೇ ಹೆಚ್ಚಳ
ಡಿ ) ಲೋಕಸಭೆಯಲ್ಲಿ ಮೀಸಲಾತಿ
80. ಸಂವಿಧಾನಕ್ಕೆ ಹತ್ತನೆಯ ಅನುಸೂಚಿಯನ್ನು ಈ ತಿದ್ದುಪಡಿ ಮೂಲಕ ಸೇರಿಸಲಾಯಿತು
ಎ ) 52 ನೇಯ ತಿದ್ದುಪಡಿ ✓
ಬಿ ) 65 ನೇಯ ತಿದ್ದುಪಡಿ
ಸಿ ) 53 ನೇಯ ತಿದ್ದುಪಡಿ
ಡಿ ) 54 ನೇಯ ತಿದ್ದು ಪಡಿ
81. ಸಿಕ್ಕಿಂಗೆ ರಾಜ್ಯದ ಸ್ಥಾನಮಾನ ಸಿಕ್ಕಿದುದು ಯಾವ ತಿದ್ದುಪಡಿ ಪ್ರಕಾರ?
ಎ ) 35 ನೇಯ ತಿದ್ದುಪಡಿ ✓
ಬಿ ) 34 ನೇಯ ತಿದ್ದುಪಡಿ
ಸಿ ) 36 ನೇಯ ತಿದ್ದುಪಡಿ
ಡಿ ) 29 ನೇಯ ತಿದ್ದುಪಡಿ
82. ರಾಷ್ಟ್ರೀಯ ಜನತಾದಳ ಪಕ್ಷದ ಚಿಹ್ನೆ
ಎ ) ಚಕ್ರ
ಬಿ ) ಲಾಟೀನು ✓
ಸಿ ) ಕಮಲ
ಡಿ ) ಹಸ್ತ
83. ಭಾರತದ ಪ್ರಥಮ ಮುಖ್ಯ ಚುನಾವಣಾ ಆಯುಕ್ತರು
ಎ ) ಕೆ.ವಿ.ಕೆ. ಸುಂದರಂ
ಬಿ ) ಡಾ . ನಾಗೇಂದ್ರಸಿಂಗ್
ಸಿ ) ಸುಕುಮಾರ ಸೇನ್ ✓
ಡಿ ) ಯಾರೂ ಅಲ್ಲ
84. ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು
ಎ ) ಸಂಸತ್ತು
ಬಿ ) ರಾಷ್ಟ್ರಪತಿ
ಸಿ ) ಚುನಾವಣಾ ಆಯೋಗ ✓
ಡಿ ) ಲೋಕಸಭಾಧ್ಯಕ್ಷ
85. ಭಾರತದ ಯಾವ ರಾಜ್ಯದಲ್ಲಿ ಮೊದಲು ಕಮ್ಯುನಿಸ್ಟ್ ಸರಕಾರ ಸ್ಥಾಪಿತವಾಯಿತು?
ಎ ) ಪ.ಬಂಗಾಲ
ಬಿ ) ಕರ್ನಾಟಕ
ಸಿ ) ಕೇರಳ ✓
ಡಿ ) ತ್ರಿಪುರಾ
86. ಯಾವ ರಾಜ್ಯದಲ್ಲಿ ಮೊದಲು ಪಂಚಾಯತ್ ರಚನೆಯಾಯಿತು?
ಎ ) ಕರ್ನಾಟಕ
ಬಿ ) ಬಿಹಾರ
ಸಿ ) ರಾಜಸ್ಥಾನ ✓
ಡಿ ) ಗುಜರಾತ್
87. ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಆರಂಭವಾದುದು
ಎ ) 1948
ಬಿ ) 1955
ಸಿ ) 1962
ಡಿ) 1952✓
88. ಅಶೋಕ ಮೆಹತಾ ಸಮಿತಿ ಎಷ್ಟು ಹಂತದ ಪಂಚಾಯತ್ ವ್ಯವಸ್ಥೆಯ ರಚನೆಗೆ ಶಿಫಾರಸ್ಸು ಮಾಡಿತ್ತು?
ಎ ) 3 ಹಂತ
ಬಿ ) 2 ಹಂತ ✓
ಸಿ ) 4 ಹಂತ
ಡಿ ) 1 ಹಂತ
89. ರಾಜ್ಯಪಾಲರ ವಿವೇಚನಾಧಿಕಾರಗಳನ್ನು ತಿಳಿಸುವ ಕಲಂ
ಎ ) 161
ಬಿ ) 162
ಸಿ ) 163 (2 ) ✓
ಡಿ ) 164
90. ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರಿಗೆ ಹಾಗೂ ಇತರ ನ್ಯಾಯಾಧೀಶರಿಗೆ ಪ್ರತಿಜ್ಞಾವಿ ಬೋಧಿಸುವವರು
ಎ ) ಕಾನೂನು ಮಂತ್ರಿ
ಬಿ ) ಕೇಂದ್ರ ಗೃಹಮಂತ್ರಿ
ಸಿ ) ಪ್ರಧಾನಮಂತ್ರಿ
ಡಿ ) ರಾಷ್ಟ್ರಪತಿ ✓
91. ಯಾವ ಕಲಂ ಅನ್ವಯ ಸರ್ವೋಚ್ಛ ನ್ಯಾಯಾಲಯಕ್ಕೆ ಸಲಹಾ ಅಧಿಕಾರ ನೀಡಲಾಗಿದೆ?
ಎ ) ಕಲಂ 213
ಬಿ ) ಕಲಂ 143 ✓
ಸಿ ) ಕಲಂ 142
ಡಿ ) ಕಲಂ 51
92. ಸರ್ವೋಚ್ಛ ನ್ಯಾಯಾಲಯದ ನ್ಯಾಯಿಕ ವಿಮರ್ಶೆ ಅಧಿಕಾರ ಯಾವ ದೇಶದ ಮಾದರಿಯದು?
ಎ ) ಫ್ರಾನ್ಸ್
ಬಿ ) ಕೆನಡಾ
ಸಿ ) ಅಮೆರಿಕಾ ✓
ಡಿ ) ಇಂಗ್ಲೆಂಡ್
93. ಭಾರತ ಸಂವಿಧಾನದಲ್ಲಿ ಶೇಷಾಧಿಕಾರಗಳನ್ನು
ಎ ) ಕೇಂದ್ರಕ್ಕೆ ನೀಡಲಾಗಿದೆ ✓
ಬಿ ) ರಾಜ್ಯಕ್ಕೆ ನೀಡಲಾಗಿದೆ
ಸಿ ) ಕೇಂದ್ರ ಮತ್ತು ರಾಜ್ಯಗಳಿಗೆ ನೀಡಲಾಗಿದೆ
ಡಿ ) ಯಾರಿಗೂ ನೀಡಿಲ್ಲ .
94. ' ಭಾರತವು ಒಂದು ಅರೆ ಸಂಯುಕ್ತ ರಾಜ್ಯವಾಗಿದೆ ' ಈ ಹೇಳಿಕೆ ಇವರದು.
ಎ ) ಕೆ.ಸಿ. ವೈಯರ್ ✓
ಬಿ ) ಐವರ್ ಜನ್ನಿಂಗ್
ಸಿ ) ಡಾ . ಬಿ.ಆರ್ . ಅಂಬೇಡ್ಕರ್
ಡಿ ) ಲಾಸ್ಕಿ
95. ವಿದೇಶಿಯರು ನಾಗರಿಕತ್ವ ಪಡೆಯುವುದು
ಎ ) ನೈಸರ್ಗಿಕರಣದಿಂದ . ✓
ಬಿ ) ನೋಂದಣಿ ಮೂಲಕ
ಸಿ ) ಅನುವಂಶೀಯತೆಯಿಂದ
ಡಿ ) ಮೇಲಿನ ಯಾವ ಕಾರಣಗಳು ಅಲ್ಲ
96. ಕೇಂದ್ರ ಲೋಕಸೇವಾ ಆಯೋಗ ತನ್ನ ವಾರ್ಷಿಕ ವರದಿಯನ್ನು ಇವರಿಗೆ ಸಲ್ಲಿಸುತ್ತದೆ.
ಎ ) ಪ್ರಧಾನಮಂತ್ರಿ
ಬಿ ) ರಾಷ್ಟ್ರಪತಿ ✓
ಸಿ ) ಗೃಹಸಚಿವ
ಡಿ ) ಯಾರಿಗೂ ಇಲ್ಲ
97. ವಲಯ ಮಂಡಳಿ ಅಧ್ಯಕ್ಷರು
ಎ ) ರಾಷ್ಟ್ರಪತಿ
ಬಿ ) ಪ್ರಧಾನಮಂತ್ರಿ
ಸಿ ) ಲೋಕಸಭಾಪತಿ
ಡಿ ) ಗೃಹಮಂತ್ರಿ ( ಕೇಂದ್ರ ) ✓
98. ಹೊಂದಿಸಿ ಬರೆಯಿರಿ
A. 1919 ರ ಭಾರತ ಸರಕಾರದ ಕಾಯ್ದೆ
B. 1935 ರ ಭಾರತ ಸರಕಾರದ ಕಾಯ್ದೆ
C. ಮಾರ - ಮಿಂಟೋ ಸುಧಾರಣೆ
D. ಮೌಂಟ್ ಬ್ಯಾಟನ್ ಯೋಜನೆ
E. ಕ್ಯಾಬಿನೆಟ್ ಮಿಶನ್ ಆಯೋಗ
1. ಪ್ರಾಂತೀಯ ಸ್ವಾಯುತ್ತತೆ
2. ಪ್ರತ್ಯೇಕ ಮತದಾನ ಪದ್ಧತಿ
3. ಭಾರತದ ವಿಭಜನೆ
4. ದ್ವಿವಿಧ ಸರಕಾರ
5. ಸಂವಿಧಾನ ಸಭೆ
ಎ ) 12453
ಬಿ ) 24651
ಸಿ ) 21435
ಡಿ ) 41235✓
99. ಕೆಳಗಿನವುಗಳಲ್ಲಿ ಪಟ್ಟಿ ಒಂದಕ್ಕೆ ಪಟ್ಟಿ ಎರಡನ್ನು ಹೊಂದಾಣಿಕೆ ಮಾಡಿ ಬರೆಯಿರಿ.
A) ಯೋಜನಾ ಆಯೋಗ
B) ರಾಷ್ಟ್ರೀಯ ಅಭಿವೃದ್ಧಿ ಮಂಡಳಿ
C) ರಾಷ್ಟ್ರೀಯ ಐಕ್ಯತಾ ಮಂಡಳಿ
D) ಸರಕಾರಿಯ ಆಯೋಗ
1) 1983
2) 1950
3) 1952
4) 1986
ಎ ) 1324
ಬಿ ) 1234
ಸಿ ) 3241
ಡಿ ) 2321 ✓
100.ಹೊಂದಿಸಿ ಬರೆಯಿರಿ.
A) ಪಂಚಾಯತ್ ರಾಜ್
B) ಪಕ್ಷಾಂತರ ನಿಷೇಧ ಕಾನೂನು
C) ಮತದಾನ ವಯಸ್ಸು 21 ರಿಂದ 18 ಕ್ಕೆ ಇಳಿಕೆ
D) ಶಾಸನಸಭೆ ಹೊಂದಿ ರಾಷ್ಟ್ರೀಯ ರಾಜಧಾನಿ ಪ್ರದೇಶವಾಗಿ ದೆಹಲಿ
1) 61 ನೆಯ ತಿದ್ದುಪಡಿ ಕಾಯಿದೆ
2) 73 ನೆಯ ತಿದ್ದುಪಡಿ ಕಾಯ್ದೆ
3) 52 ನೆಯ ತಿದ್ದುಪಡಿ ಕಾಯ್ದೆ
4) 69 ನೆಯ ತಿದ್ದುಪಡಿ ಕಾಯ್ದೆ
ಎ) 1234
ಬಿ) 2314✓
ಸಿ) 1342
ಡಿ) 4321
.... END .......